The Catcher in the Rye-ಈ ಕಾದಂಬರಿಯನ್ನು ಜೆ.ಡಿ. ಸಲಿಂಜರ್ ಅವರು ಬರೆದಿದ್ದು, 1945-1946 ರ;ಲ್ಲಿ ಸ್ವಲ್ಪಸ್ವಲ್ಪವಾಗಿ ಸರಣಿ ರೂಪದಲ್ಲಿ ಪ್ರಕಟಗೊಂಡು, ಕೊನೆಗೂ 1951ರಲ್ಲಿ ಕಾದಂಬರಿ ರೂಪು ಪಡೆಯಿತು. ಹದಿಹರೆಯದವರ ವರ್ತನೆಗಳು, ಗುಣ ಸ್ವಭಾವಗಳು, ಮದುವೆಪೂರ್ವ ಲೈಂಗಿಕತೆ ಇಂತಹ ವಿಷಯ ವಸ್ತುಗಳನ್ನು ಒಳಗೊಂಡಿದ್ದು, ಹದಿಹರೆಯದವರನ್ನು ದಾರಿ ತಪ್ಪಿಸುತ್ತದೆ ಎಂಬ ಕಾರಣಕ್ಕೆ 1992ರಲ್ಲಿ ಸರ್ಕಾರ ಈ ಕಾದಂಬರಿಯನ್ನು ನಿಷೇಧಿಸಿತ್ತು. ಆದರೆ, ಈ ಕಾದಂಬರಿಯು ಲೈಂಗಿಕ ಶಿಕ್ಷಣವನ್ನು ಕೇಂದ್ರೀಕರಿಸಿದೆ ಎಂಬ ವಾದವೂ ಇದೆ. ಲೇಖಕ ಎಸ್.ಎಫ್. ಯೋಗಪ್ಪನವರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರಾದ ಯೋಗಪ್ಪನವರ್ ಕೆ.ಎ.ಎಸ್. ಅಧಿಕಾರಿಯಾಗಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ', 'ಪ್ರೀತಿ ಎಂಬುದು ಚಂದ್ರನ ದಯೆ', 'ಶೋಧ' ಎಂಬ ಕಾದಂಬರಿಗಳನ್ನು, 'ಆರಾಮ ಕುರ್ಚಿ ಮತ್ತು ಇತರ ಕತೆಗಳು', 'ಮೂಟೇಶನ್' ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. 'ಮಾಯಾ ಕನ್ನಡಿ-ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು', ಜೆ.ಡಿ. ಸಾಲಿಂಜರ್‌ನ ಕಾದಂಬರಿ 'ಹದಿಹರೆಯದ ಒಬ್ಬಂಟಿ ಪಯಣ' ಅವರ ಅನುವಾದಿತ ಪುಸ್ತಕಗಳು. ...
READ MORE