ಚಿಕ್ಕ ಅಧ್ಯಾಯಗಳ ಮೂಲಕ ಸ್ವಗತ ಶೈಲಿಯಲ್ಲಿ ಕತೆಯೂ ಬಿಚ್ಚಿಕೊಳ್ಳುವ ತಂತ್ರವು ಸಂವಾದ ಕಾದಂಬರಿಯಾಗಿದೆ. ಇದನ್ನು 2007 ರಲ್ಲಿಯೇ ತುಮಕೂರು ಬೆಂಗಳೂರು ರೈಲಿನಲ್ಲಿ ಪ್ರಯಾಣಿಸುವಾಗಲೇ ಬರೆದು ಮುಗಿಸಿದ್ದೆ ಎಂದು ಲೇಖಕರು ತಿಳಿಸುತ್ತಾರೆ. ಈ ಕಾದಂಬರಿಯೊಂದಿಗೆ ತರಂಗ ವಾರಪತ್ರಿಕೆಯಲ್ಲಿ 'ಇಣುಕು' ಮಿನಿ ಅಂಕಣದೊಂದಿಗೆ ಪ್ರಕಟವಾಗಿರುವ ಘಟನಾವಳಿಗಳ ಬರಹಗಳನ್ನು ಸೇರಿಸಲಾಗಿದೆ. ಕೊನೆಯಲ್ಲಿ ಬಹುಮಾನಿತ ವಿಮರ್ಶೆಗಳಿವೆ. ಮುಖಪುಟ ಅರ್ಥಗರ್ಭಿತವಾಗಿ ರಚಿಸಿರುವುದು ವಿಶೇಷ .
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE