ಕಸ್ತೂರಬಾ

Author : ಪ್ರಭಾಕರ ಮ. ನಿಂಬರಗಿ

₹ 300.00




Published by: ಸೃಷ್ಟಿ ಪಬ್ಲಿಕೇಷನ್ಸ್
Address: ಸೃಷ್ಟಿ ಪ್ರಕಾಶನ

Synopsys

ಭಾರತದಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಅರಿಯದವರಿಲ್ಲ. ಅವರ ಹುಟ್ಟಿನಿಂದ ಹಿಡಿದು ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದಂತಹ ಹೋರಾಟಗಳ ಕುರಿತು ಹಲವು ಪುಸ್ತಕಗಳು ಪ್ರಕಟವಾಗಿವೆ ಮತ್ತು ಅವುಗಳು ಚರಿತ್ತೆಯ ಪುಟಗಳಲ್ಲಿ ಅಚ್ಚಳಿಯದೆ ಉಳಿದಂತಹ ವಿಷಯಗಳಾಗಿವೆ. ಆದರೆ ಭಾರತದಲ್ಲಿ ಎಷ್ಟು ಜನರಿಗೆ ಕಸ್ತೂರ್ಬಾ ಬಾಯಿ ಬಗ್ಗೆ ತಿಳಿದಿದೆ ಎಂದರೆ, ಅವರ ಸಂಖ್ಯೆ ಬಹಳ ಕಡಿಮೆ ಇರಬಹುದು. ಮಹಾತ್ಮಾ ಗಾಂಧಿಯವರ ಜೊತೆ ಜೊತೆಯಾಗಿ ತನ್ನ ಬಾಳು ನಡೆಸಿದ ಕಸ್ತೂರ್ಬಾ ಅವರ ಕುರಿತು ಬರೆದಂತಹ ಕಾದಂಬರಿ ‘ಕಸ್ತೂರಬಾ’. ಇದು ಹಿಂದಿಯ ‘ಬಾ’ ಕೃತಿಯ ಕನ್ನಡ ಮೂಲ. ಹಿಂದಿ ಕಾದಂಬರಿಕಾರರಾದ ಗಿರಿರಾಜ ಕಿಶೋರ್‍ ಅವರ ಬರೆದ ಇನ್ನೊಂದು ಕಾದಂಬರಿ ‘ಪಹಲಾ ಗಿರಮಿಟಿಯಾ’. ಇದು ಮಹಾತ್ಮ ಗಾಂಧಿಯವರನ್ನು ಕೇಂದ್ರವನ್ನಾಗಿಟ್ಟುಕೊಂಡು ಬರೆದಂತಹ ಕಾದಂಬರಿ. ಇದರ ಜೊತೆಗೆ ಕಸ್ತೂರ್ಬಾ ಗಾಂಧಿಯವರನ್ನು ಕೂಡ ಕೇಂದ್ರವನ್ನಾಗಿಟ್ಟುಕೊಂಡು ‘ಬಾ’ ಪುಸ್ತಕ ರಚಿಸಿದರು. ಕಸ್ತೂರ್ಬಾ ಅವರ ದಿಟ್ಟ ಹೆಜ್ಜೆ, ಮಾನಸಿಕ ನಿರ್ಣಯಗಳು, ಅವರ ಸಹಿಷ್ಣುತತೆಯ ಗುಣ ಹೀಗೆ ಹಲವು ವಿಷಯಗಳು ಈ ಪುಸ್ತಕದ ಕಥಾವಸ್ತು. ಮಹಾತ್ಮಾ ಗಾಂಧಿಯವರ ವ್ಯಕ್ತಿತ್ವ ವಿಕಸನದಲ್ಲಿ ಕಸ್ತೂರ್ಬಾ ಅವರ ಪಾತ್ರದ ಕುರಿತಾದ ವಿವರಣೇಯನ್ನು ಕೂಡ ಈ ಪುಸ್ತಕದಲ್ಲಿ ನೀಡಲಾಗಿದೆ.

About the Author

ಪ್ರಭಾಕರ ಮ. ನಿಂಬರಗಿ

ಲೇಖಕ,ಅನುವಾದಕ, ಪ್ರಭಾಕರ ಮ.ನಿಂಬರಗಿ ಅವರು ಕಲಬುರಗಿ ಮೂಲದವರು. ಹಿಂದಿ, ಇಂಗ್ಲಿಷ್ ನಿಂದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು ಸೀಜರ್ ಮತ್ತು ಕ್ಲಿಯೋಪಾತ್ರ, ಹೋಮಿಜಹಾಂಗೀರ್ ಬಾಬ, ಗಿರಿಮಿಟಿಯಾ, ಕಸ್ತೂರ ಬಾ ಸೇರಿದಂತೆ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Related Books