ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರ ಅನುವಾದಿತ ಕಾದಂಬರಿ ಫ್ರ್ಯಾಂಕಿನ್ ಸ್ಟೈನ್. ಈ ಕಾದಂಬರಿ ವಿಶ್ವಸಾಹಿತ್ಯದಲ್ಲಿ ಒಂದು ಹೊಸ ಥೀಮನ್ನು ಮತ್ತು ಅದರ ಜೊತೆಯಲ್ಲಿ "ಫ್ರ್ಯಾಂಕಿನ್ ಸ್ಟೈನ್" ಎಂಬ ಹೊಸ ಶಬ್ದವನ್ನು ಹುಟ್ಟು ಹಾಕಿದ ಅಪೂರ್ವ ಕೃತಿ. ಈ ಕಾದಂಬರಿ ಹತ್ತೊಂಬತ್ತು ವರ್ಷ ಪ್ರಾಯದ ಹುಡುಗಿಯನ್ನು ಲೇಖಕಿಯಾಗಿಸಿದ ಸನ್ನಿವೇಶ ಕೂಡ ಅಷ್ಟೇ ಅಪೂರ್ವ. ಇದನ್ನು ಆಧರಿಸಿ 37 ಚಲನಚಿತ್ರಗಳಾಗಿವೆ. "ಗಾನ್ ವಿತ್ ದ ವಿಂಡ್" ಕೃತಿಯನ್ನು ಸಮರ್ಥವಾಗಿ ಕನ್ನಡಕ್ಕೆ ತಂದ ಶ್ರೀಮತಿ ಶ್ಯಾಮಲಾ ಮಾಧವ "ಫ್ರ್ಯಾಂಕಿನ್ ಸ್ಟೈನ್" ಕೃತಿಯನ್ನು ಅಷ್ಟೇ ಚೆನ್ನಾಗಿ ಅನುವಾದಿಸಿದ್ದಾರೆ.
ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಲ್ಲಿ ಜನಿಸಿದವರು, ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ತಂದೆ ನಾರಾಯಣ ಉಚ್ಚಿಲ್ ಹಾಗೂ ತಾಯಿ ಯು. ವಸಂತಿ, ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. 'ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರದಲ್ಲಿ ಕೃತಿ ...
READ MORE