ಲೇಖಕ ಡಿ.ಕೆ.ಚೌಟರು ತುಳು ಭಾಷೆಯಲ್ಲಿ ಬರೆದ ಕಾದಂಬರಿಯನ್ನು ಲೇಖಕ ಮುಹಮ್ಮದ್ ಕುಳಾಯಿ ಅವರು ‘ಮಿತ್ತಬೈಲ್ ಯಮುನಕ್ಕ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಚೌಟರ ಇತಿಹಾಸದ ವಸ್ತು ಒಳಗೊಂಡಿದ್ದು, ನಿರೂಪಣಾ ಶೈಲಿ, ಸನ್ನಿವೇಶದ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಅಂಶಗಳು ಓದುಗರ ಗಮನ ಸೆಳೆಯುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಆಚರಣೆಗಳು, ತಂಟೆಗಳು, ಬ್ರಿಟಿಷ ದುರಾಡಳಿತ, ದೌರ್ಜನ್ಯ ಇತ್ಯಾದಿ ಅಂಶಗಳು ಕಾದಂಬರಿಗೆ ವಸ್ತು ನೀಡಿದ್ದು, ಅಂತಹ ಸನ್ನಿವೇಶಗಳನ್ನು ಯಮುನಕ್ಕ ಎದುರಿಸುವ ರೀತಿಯು ಕಾದಂಬರಿಯ ಮುಖ್ಯ ಬಿಂದು.
ಮುಹಮ್ಮದ್ ಕುಳಾಯಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕೃತಿಗಳು: ಕಾಡಂಕಲ್ ಮನೆ (ಕಾದಂಬರಿ), ನನ್ನೊಳಗಿನ ನಾನು: ಬಿ.ಎ. ಮೊಹಿನುದ್ದೀನ್ ಆತ್ಮಕಥನ, ಚೌಟರ ಮಿತ್ತಬೈಲ್ ಯಮುನಕ್ಕ (ಕಾದಂಬರಿ) ...
READ MORE