ಯಂಡಮೂರಿ ವೀರೇಂದ್ರನಾಥ್ ಅವರು ಬರೆದಿರುವ ಈ ಕಾದಂಬರಿಯನ್ನು ಲೇಖಕ ವಂಶಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು.ಈ ಧಾರಾವಾಹಿಗೆ ಶಿವರಾಜ್ ಕುಮಾರ್ ಹಾಗೂ ಇತರ ಕಲಾವಿದರು ರೂಪದರ್ಶಿಗಳಾಗಿ ಸಹ ಕಾಣಿಸಿ ಕೊಂಡಿದ್ದರು.ಇದು ಚಿರಂಜೀವಿ ಮತ್ತು ವಿಜಯಶಾಂತಿ ಅಭಿನಯದಲ್ಲಿ ಚಲನಚಿತ್ರ ಸಹ ಆಗಿದೆ. ಗೂಢಚಾರಿಕೆಯ ಪ್ರಪಂಚ ಅತ್ಯಂತ ಅಪೂರ್ವವಾದದ್ದು.. ವಿಶಿಷ್ಟವಾದದ್ದು... ಅಷ್ಟೇ ವಿಚಿತ್ರವಾದದ್ದು ಸಹ. ಸೈನಿಕರಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಾದ ದೇಶಭಕ್ತಿ ಇವರದ್ದು ಎಂತಲೇ ಹೇಳಬಹುದು.ಎಷ್ಟೋ ಸಲ ಗೂಢಚಾರಿಗಳ ಕಾರ್ಯಾಚರಣೆಗಳು ವಿಫಲವಾಗಿ ಶತ್ರು ದೇಶದ ಕೈಗೆ ಸೆರೆ ಸಿಕ್ಕಾಗ ಇವರು ನಮ್ಮ ದೇಶದವರೇ ಎಂದು ಅವರ ತವರಿನವರು ಸಹ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಇವರದ್ದು ಅನಾಮಿಕವಾಗಿ ಸರಿದು ಹೋಗುವ ಸಂಘರ್ಷಣೆಯ ಬದುಕು....ಆದರೂ ಸಹ ದೇಶಕ್ಕಾಗಿ ತಮ್ಮ ತನು ಮನಗಳನ್ನು ಸಂಪೂರ್ಣವಾಗಿ ಸಮರ್ಪಿಸಿ ತೆರೆಯ ಹಿಂದೆ ನಡೆಯುವ ಶತ್ರು ದೇಶಗಳ ಷಡ್ಯಂತ್ರಗಳನ್ನು ವಿಫಲಗೊಳಿಸುವ ಇವರಿಗೆ ಯಾವುದೇ ಬಿರುದು-ಬಾವಲಿಗಳೇ ಆಗಲಿ ಬಹುಮಾನಗಳೇ ಆಗಲಿ ದಕ್ಕುವುದಿಲ್ಲ. ಹಾಗಾಗಿಯೇ ಇವರ ಬದುಕು ಕುತೂಹಲಕಾರಿಯೂ ಹೌದು... ಅತ್ಯಂತ ಅಪಾಯಕಾರಿಯೂ ಹೌದು.ಶತ್ರು ದೇಶದವರ ಕೈಗೆ ಸಿಕ್ಕರಂತೂ ಚಿತ್ರಹಿಂಸೆಯ ನರಕವನ್ನೇ ಅನುಭವಿಸಿ ಸಾಯಬೇಕಾಗುತ್ತದೆ. ಇದೇ ಕಥಾವಸ್ತುವುಳ್ಳ ರುದ್ರನೇತ್ರ ಚಾಣಾಕ್ಷ...ನಿರ್ಭೀತ...ಹೃದಯವಂತ ಏಜೆಂಟ್ ಒಬ್ಬನ ಕಥೆ. ಮೊದಲ ಮುದ್ರಣ- 1960. ನಾಲ್ಕನೆಯ ಮುದ್ರಣ- 2010. ಐದನೇ ಮುದ್ರಣ- 2021.
ಸ್ವತಃ ಪ್ರಕಾಶಕರಾದ ವಂಶಿ ಅವರು ಯಂಡಮೂರಿ ವೀರೇಂದ್ರನಾಥ ಅವರ ಆನಂದೋಬ್ರಹ್ಮ, ಬೆಳದಿಂಗಳ ಬಾಲೆ, ತುಳಸಿ, ಪ್ರಾರ್ಥನೆ, ತುಳಸಿ ದಳ ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE