ಮರಾಠಿ ಲೇಖಕ ನ. ಚಿ. ಕೇಳಕರ್ ಅವರ ಕಾದಂಬರಿಯನ್ನು ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ- ಯೋಗಾಯೋಗ ಅಥವಾ ಕಾಕತಾಳೀಯ ನ್ಯಾಯ. ಜೀವನದ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸುವ ಸಾಮಾಜಿಕ ಕಾದಂಬರಿ ಇದಾಗಿದೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಭಿಕಾಜಿಪಂತ ಕಾಳೆ ಎಂಬುದು ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ. ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...
READ MORE