ಹೆಣ್ಣನ್ನು ಕಾಡುವ ಕನ್ಯತ್ವ,ಅತ್ಯಾಚಾರದಂತಹ ಪಿಡುಗುಗಳ ವಿರುದ್ಧಧ್ವನಿ ಎತ್ತುವ ಕಾದಂಬರಿ ಇದು.ಕನ್ಯತ್ವವೆಂಬುದು ಭಾರತೀಯ ನಾರಿಯನ್ನು ಕಾಡುತ್ತಿರುವ ಯುಗಾಂತರದ ಸಮಸ್ಯೆ.ತಾವು ಬಾಧ್ಯರಲ್ಲದ ಪ್ರಕರಣಗಳಿಗಾಗಿಯೆ ಇಂದು,ಅಂದು, ಎಂದೂ ಹೆಣ್ಣು ಶಿಕ್ಷೆ ಅನುಭವಿಸುತ್ತಿದ್ದಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ನನ್ನು ಸಮಾಜ ಮಾತ್ರವಲ್ಲ ಮನೆಯವರು ಕೂಡ ಮಾಡದ ಅಪರಾಧಕ್ಕಾಗಿ ಮಾನಸಿಕವಾಗಿ ಹಿಂಸಿಸುತ್ತಾರೆ, ಯಾಕೆ? ಆದರೆ ಈಗ ಸಮಾಜ ಸುಧಾರಿಸುತ್ತಿದೆ ಹೆಣ್ಣು ದನಿಯೆತ್ತಿದ್ದಾಳೆ. ಆದರೂ ಅಂಥದೊಂದು ಅವಮಾನ ಭಾವ ಅವಳಿಂದ ದೂರವಾಗದು.ಅತ್ಯಾಚಾರ ಅನ್ನುವಂಥ ವಸ್ತುವನ್ನಿಟ್ಟುಕೊಂಡು ಬರೆದ ಕಾದಂಬರಿ ಇದು. ಅದ್ಭುತ ವ್ಯಕ್ತಿತ್ವದ ಅರುಂಧತಿ ಎಷ್ಟೋ ಯುವತಿಯರಿಗೆ ಸ್ಫೂರ್ತಿಯಾಗುವಂತವಳು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE