ಹಿಮಾಂಶು ಜೋಶಿ ಅವರು ಹಿಂದಿಯಲ್ಲಿ (ಕಗಾರ್ ಕಿ. ಆಗ್) ಬರೆದ ಕಾದಂಬರಿ-ಅಂತಿಮ ಜ್ವಾಲೆ. ಕುಸುಮ ಗೀತ ಜೆ.ಎಸ್. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಕುವೆಂಪು ಭಾಷಾ ಭಾರತಿ ಅನುವಾದ ಪುರಸ್ಕಾರ (2009) ಲಭಿಸಿದೆ.
ಶೋಷಣೆಗೆ ಒಳಗಾದ ಜಗತ್ತಿನ ಎಲ್ಲ ಹೆಣ್ಣುಗಳ ಪ್ರತಿನಿಧಿ -ಗೋಮತಿ. ಕಾದಂಬರಿಯ ನಾಯಕಿ. ಬಡತನ, ದ್ವೇಷ, ಅಸೂಹೆ, ಶೋಷಣೆಗೆ ಇತ್ಯಾದಿ ಮೊದಲು ಬಲಿಯಾಗುವವಳೇ ಹೆಣ್ಣು. ಅವಮಾನ-ಹಿಂಸೆ-ನೋವು ನುಂಗಿ ಒಡಲಲ್ಲಿ ಅಗ್ನಿಯನ್ನೇ ತುಂಬಿಕೊಂಡಂತಿರುವ ಮಹಿಳೆಯ ದಾರುಣ ಕಥೆ ಇದು. ಅಂತಿಮಜ್ವಾಲೆ ಎನ್ನುವುದು ಆಕೆಯ ಕ್ರಾಂತಿಯ ಸಂಕೇತವೂ ಆಗಿದೆ ಎನ್ನುವುದನ್ನು ಗಮನಿಸಬಹುದು. .
©2024 Book Brahma Private Limited.