ಫಾರ್ ಫ್ರಂ ದಿ ಮ್ಯಾಡಿಂಗ್ ಕ್ರೌಡ್ ನ ಮರುಕಥನಕ್ಕಾಗಿ ಬ್ರಿಟಿಷ್ ಕ್ಲಾಸಿಕ್ ಸಿರೀಸ್ ಆವೃತ್ತಿಯನ್ನು ಲೇಖಕರಾದ ಕೇಶವ ಮಳಗಿ ಅವರು ಆರಿಸಿಕೊಂಡಿದ್ದಾರೆ. ಮೂಲ ಕಾದಂಬರಿಯ ಶಿರ್ಷೀಕೆಯನ್ನು ಥಾಮಸ್ ಹಾರ್ಡಿ ಬರೆದಿದ್ದು ಕನ್ನಡಕ್ಕೆ ’ಒಲವು ತುಂಬಿದ ದಾರಿ’ ಎಂಬ ಅನುವಾದವನ್ನು ಮಾಡಿದ್ದಾರೆ.
ಕೈಗಾರಿಕೆಗೆ ಒಳಗಾಗಿ ತೀವ್ರಗತಿಯಲ್ಲಿ ಬದಲಾಗುತ್ತಿರುವ ಸಮಾಜದ ಮುಗ್ಧತೆಯನ್ನು ಹಿಡಿದಿಡುವುದು ಹಾರ್ಡಿಯ ಮುಖ್ಯ ಉದ್ದೇಶ. ಪ್ರಾದೇಶಿಕ ಪರಂಪರೆ, ಜನಪದ, ವಿಲಕ್ಷಣ ವ್ಯಕ್ತಿಗಳು ಇತ್ಯಾದಿಗಳನ್ನು ಓದುಗರಿಗೆ ಮುಟ್ಟಿಸುವುದು ಕಾದಂಬರಿಯ ಗುರಿ, ಎಂದು ಹಾರ್ಡಿ ಹೇಳಿಕೊಂಡಿದ್ದಾನೆ.
ಸಾಮಾನ್ಯನೊಬ್ಬನ ಉತ್ಕಟ ಪ್ರೇಮದ ಹಂಬಲ (ಫಾರ್ ಫ್ರಂ ದಿ ಮ್ಯಾಡಿಂಗ್ ), ರೂಕ್ಷತೆ ಮತ್ತು ರುದ್ರ ಚೆಲುವಿನ ವುದರಿಂಗ್ ಹೈಟ್ಸ್, ಏಕಮುಖ ಪ್ರೇಮದ ದುರಂತ (ಸರಸ್ಸೀಸ್), ಕಾಲದ ನಿರ್ದಯತೆಗೆ ಬಲಿಯಾದ ಕವಿ ಇಂತಹ ಶೀರ್ಷಿಕೆಯಡಿ ಮರುಕಥನವನ್ನು ಕೇಶವ ಮಳಗಿ ಅವರು ಬರೆದಿದ್ದಾರೆ.
©2025 Book Brahma Private Limited.