ಕನ್ನಡಕ್ಕೆ ಅನುವಾದಿತ ಇರಾನ್ ಮೂಲದ ಲೇಖಕಿಯ ಫ್ರೆಂಚ್ ಗ್ರಾಫಿಕ್ ಕಾದಂಬರಿ. ಇತ್ತೀಚಿಗೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗಳ ಪ್ರತಿಬಿಂಬವೆನ್ನುವಂತೆ ಅಂದಿನ ಕಾಲದ ಕ್ರಾಂತಿ, ರಾಜಾಡಳಿತ ಇಂತಿ ಅಂದಿನ ಹಲವು ಸಮಸ್ಯೆಗಳ ಸುತ್ತ ಸುತ್ತಿ ಗಾಢವಾಗಿ ಪರಿಣಾಮ ಬೀರಿ ಯೋಚಿಸುವಂತೆ ಮಾಡುತ್ತದೆ ಈ ಕೃತಿ. ಮಾರ್ಜಾನ್ ಮಗುವಿನ ಮುದ್ಧತೆ, ಜಗತ್ತು ನೋಡುವ ಯಾವುದೇ ಫಿಲ್ಟರ್ ಇಲ್ಲದ ಪರಿ, ಆಸೆ, ನಂಬಿಕೆಗಳಲ್ಲಾ ಮನದಾಳದಲ್ಲಿ ಕಲ್ಲು ಹಾಕಿ ಅಳಿಸುತ್ತೆ. ಕಪ್ಪು ಬಿಳಿ ಚಿತ್ರಗಳು ಆ ಕಾಲಕ್ಕೆ ಸೆಳೆದುಕೊಂಡು ಬಿಡುತ್ತೆ. ಕತೆಯ ಪಾತ್ರವೇ ಆಗಿದ್ದೇವೆಯೆಂಬ ಹಾಗೆ ಅನಿಸಿಬಿಡುತ್ತೆ. ಭಾವನೆಗಳು ಅಲ್ಲೋಲ ಕಲ್ಲೋಲವಾಗೋದಂತು ಖಂಡಿತ. ಅವಳು ಕಷ್ಟಪಟ್ಟ ಪರಿ ಅನುಭವಿಸಿದ ನೋವು, ದುಃಖಿಸಿದ ಮನಸು ನಮ್ಮದೂ ಎಂಬಂತೆ ಅನುಭವವಾಗುತ್ತದೆ. ಅಂದಿನ ಇರಾನಿನ ಚಿತ್ರಣವನ್ನು ತನ್ನ ಚಿಕ್ಕ ವಯಸ್ಸಿನ ಕಣ್ಣುಗಳಿಂದ ಕಾಣುತ್ತಾ ಬಂದ ಒಂದು ಮನಸಿನ ಕತೆಯಿಲ್ಲಿದೆ. ಒಂದೇ ಸಲ ಕೂತು ಓದಿ ಮುಗಿಸಿಬಿಡಬೇಕು ಅನಿಸಿದರೂ ಅಡೆತಡೆ ಹಾಕಿಕೊಂಡು ಕಾದು ಕೂತು ಓದಿದ ಕೃತಿಯಿದು. ಕೆಲವೊಂದು ಕಾದಂಬರಿಗಳನ್ನು ನಾವು ನಮ್ಮ ಸ್ವಂತವೇ ಎಂದು ಅನುಭವಿಸೋದು ಇದೆಯಲ್ವ? ಅಂತಹದೇ ಇದು. ತುಂಬಾ ಪ್ರೀತಿಸ್ತೀರ ಇದನ್ನ ಖಂಡಿತವಾಗಿಯೂ. ಕನ್ನಡಕ್ಕೆ ಅನ್ನುವುದಕ್ಕಿಂತ ಕನ್ನಡದಲ್ಲೇ ಬರೆದಂತೆ ಅನುವಾದ ಮಾಡಿದ್ದಾರೆ ಲೇಖಕಿ ಪ್ರೀತಿ ನಾಗರಾಜ. ಅಡೆತಡೆಯಿಲ್ಲದೆ ಅನುವಾದವೆಂದು ಭಾವಿಸಿಕೊಳ್ಳದಂತೆ ತುರ್ಜುಮೆ ಮಾಡಿದ್ದಾರೆ ಲೇಖಕಿ. ಓದಲೇ ಬೇಕಾದ ಒಂದು ಅದ್ಬುತವಾಗಿ ಕನ್ನಡಕ್ಕೆ ತರ್ಜುಮೆಯಾದ ಕೃತಿಯೆಂದರೆ ತಪ್ಪಾಗದು.
ಪತ್ರಕರ್ತರು, ಬರಹಗಾರರಾದ ಪ್ರೀತಿ ನಾಗರಾಜ ಅವರ ಹುಟ್ಟೂರು ದಾವಣಗೆರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಹಾಗೂ ಸಿಎನ್‌ಬಿಸಿ ಮುಂತಾದ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಬಿ. ಜಯಶ್ರೀ ಅವರ ಆತ್ಮಕತೆ ’ಕಣ್ಣಾಮುಚ್ಚೇ ಕಾಡೇಗೂಡೇ’ ಕೃತಿಯನ್ನು ನಿರೂಪಣೆ ಮಾಡಿದ್ದಾರೆ. ಪ್ರಜಾವಾಣಿ ಪತ್ರಿಕೆಗೆ ಬರೆಯುತ್ತಿದ್ದ ಮಿರ್ಚಿ ಮಂಡಕ್ಕಿ ಅಂಕಣವೂ ಅದೇ ಹೆಸರಿನ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರಿಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗೂ ಇವರು ಬರೆದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಲೇಖನಕ್ಕೆ ಸರೋಜಿನಿ ನಾಯ್ಡು ಬಹುಮಾ ದೊರೆತಿದೆ. ...
READ MORE