ಮರಾಠಿಯ ಖ್ಯಾತ ಕಾದಂಬರಿಕಾರ, ಸರಸ್ವತಿ ಸಮ್ಮಾನ ಪುರಸ್ಕೃತ ಶರಣಕುಮಾರ ಲಿಂಬಾಳೆ ಅವರ ಕಾದಂಬರಿಯನ್ನು ಲೇಖಕಿ ಡಾ. ಪೂರ್ಣಿಮಾ ಮಾಧವ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಹಿಂದೂ. ದಲಿತ ಹಾಗೂ ಸವರ್ಣಿಯರ ಮಧ್ಯೆ ಪರಂಪರಾಗತವಾಗಿ ನಡೆಯುತ್ತಲೇ ಬಂದಿದ್ದ ಸಂಘರ್ಷವನ್ನು ಕತಾ ವಸ್ತು ಹೊಂದಿದ್ದು, ಹಿಂದೂ ಧರ್ಮೀಯರು ಎಂದು ಹೇಳಿಕೊಳ್ಳುವವರು ಹೇಗೆ ತಮ್ಮ ಸ್ವಾರ್ಥ ಸಾಧನೆಗಾಗಿ ಅಸ್ಪೃಶ್ಯರನ್ನು ಕೀಳು ಮನುಷ್ಯರಂತೆ ಕಂಡು ಅಮಾನವೀಯವಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ಚಿತ್ರಿಸಿದ್ದಾರೆ.
ಪ್ರಮೀಳಾ ಮಾಧವ್ ಅವರು ಬೆಂಗಳೂರಿನ ಆಚಾರ್ಯ ವಾಣಿಜ್ಯ ಕಾಲೇಜಿನಲ್ಲಿ ಅಧ್ಯಾಪಕಿ. ಮೂಲತಃ ಕಾಸರಗೋಡಿನವರಾದ ಅವರು ಹೈಸ್ಕೂಲ್ ಶಿಕ್ಷಣವನ್ನು ಬಿಇಎಂ ಹೈಸ್ಕೂಲ್ ನಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಕಾಸರಗೋಡು ಸರ್ಕಾರಿ ಪದವಿ ಕಾಲೇಜಿನಲ್ಲಿ ಪಡೆದರು. ಅವರೀಗ ಬೆಂಗಳೂರು ನಿವಾಸಿ. ಮರಾಠಿಯಿಂದ ಕನ್ನಡಕ್ಕೆ ಅನುವಾದಿಸುತ್ತಾರೆ. ಶರಣಕುಮಾರ ಲಿಂಬಾಳೆ ಅವರ ’ಬಹುಜನ’, ’ಹಿಂದೂ-ಸವರ್ಣ-ದಲಿತ ಸಂಘರ್ಷ, ನರವಾನರ ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ...
READ MORE