ತಂದೆತಾಯಿಗಳಲ್ಲಿರುವ ಗುಣಾವಾಗುಣಗಳು,ಸಂಸ್ಕಾರಗಳು,ಮಕ್ಕಳಿಗೆ ಅನುವಂಶಿಕವಾಗಿ ಇಲ್ಲವೇ ಮಾದರಿಯಾಗಿ ಬರುತ್ತವೆ.ರೈಲ್ವೇ ಸ್ಟೇಷನ್ ಮಾಸ್ತರ್ ರಾಗಿದ್ದ ನಟರಾಜ್ ಅವರದು ನೆಮ್ಮದಿಯ ಸಂಸಾರ ಮೂರು ಹೆಣ್ಣುಮಕ್ಕಳು ಉಪಾಸನಾ, ಉತ್ಪಲ, ಉಷಾ, ಜನಾನುರಾಗಿಯಾದ ನಟರಾಜ್ ರ ಮನೆಗೆ ಶ್ರೀಮಂತ ಕಲಾವಿಧ ಅಲೋಕ ಅತಿಥಿಯಾಗಿ ಬರುತ್ತಾರೆ.ಉಪಾಸನಾ ಮತ್ತು ಅಲೋಕ್ ಮದ್ಯ ಆಕರ್ಷಣೆ ಉಂಟಾಗಿ ನಾನು ಅವನನ್ನೇ ಮದುವೆಯಾಗುವುದಾಗಿ ಹಠ ಮಾಡುತ್ತಾಳೆ,ಇದು ತಂದೆಗೂ ಇಷ್ಟವಾಗದೆ ಇದ್ದರೂ ಅವ್ರು ಅದನ್ನು ಕಟುವಾಗಿ ನಿರಾಕರಿಸದೇ 1 ತಿಂಗಳು ಗಡುವು ಕೊಟ್ಟು ಅಷ್ಟರೊಳಗೆ ಮದುವೆ ಮಾಡಿಕೊಂಡು ಹೋಗು,ಅಲ್ಲದೇ ತಿಂಗಳೊಳಗೆ ಮದುವೆಯಾಗದೆ ಹೋದರೆ ನಾವು ತೋರಿಸಿದ ಹುಡುಗನ್ನ ಮದುವೆ ಮಾಡಿಕೊಳ್ಳಬೇಕು ಎನ್ನುವ ಷರತ್ತು ಹಾಕುತ್ತಾರೆ.ಆದ್ರೆ ಮನಸಿಚ್ಛೆಯಂತೆ ನಡೆಯದ ಮದುವೆಯನ್ನು ಆಕೆ ನಿರಾಕರಿಸುತ್ತಾಳೆ .ಗಡುವು ಮುಗಿದು ತಂದೆಯ ಷರತ್ತಿನಂತೆ ಶರತ್ ನ ಕೈ ಹಿಡಿಯುತ್ತಾಳೆ.ಅಲೋಕ ನನ್ನು ಮನಸಾರೆ ಪ್ರೀತಿಸಿದ್ದ ಉಪಾಸನ ಶರತ್ನನ್ನು ಗಂಡನಾಗಿ ಒಪ್ಪಿಕೊಳ್ಳುವುದಿಲ್ಲ.ಉಪಾಸನಾಳ ವರ್ತನೆಗೆ ಕಾರಣ ತಿಳಿದ ಶರತ್ ಕೋಪಗೊಳ್ಳದೆ ಅವನು ಸಹ 1ತಿಂಗಳು ಗಡವು ನೀಡಿ ತೀರ್ಮಾನ ಕೈಗೊಳ್ಳಲು ಹೇಳುತ್ತಾನೆ.ಉಪಾಸನಾ ತೆಗೆದುಕೊಂಡ ತೀರ್ಮಾನ ವೇನು?ಅನ್ನೋದು ಕಾದಂಬರಿಯು ಒಳಗೊಂಡಿರವ ಕುತೂಹಲ.
©2025 Book Brahma Private Limited.