ಶ್ರೀ ಮುನ್ಷಿ ಪ್ರೇಮ್ ಚಂದ್ ಹಿಂದಿಯಲ್ಲಿ ಹೊಸಯುಗದ ಬಾಗಿಲನ್ನು ತೆರೆದ ಕಾದಂಬರಿಕಾರ. ನಿಜವಾದ ಅರ್ಥದಲ್ಲಿ ಅವರು ಅಖಿಲ ಭಾರತೀಯ ಕಾದಂಬರಿಕಾರರು. ಅವರ ನಿರ್ಮಲಾ ಎಂಬ ಈ ಕೃತಿಯೂ ಅದೇ ಹೆಸರಿನ ತರುಣಿಯೊಬ್ಬಳ ಕಥೆಯಾಗಿದೆ. ಅವಳು, ಸನ್ನಿವೇಶಗಳ ಸುಳಿಯಲ್ಲಿ ಸಿಕ್ಕಿಕೊಂಡು, ತನ್ನ ತಂದೆಯ ವಯಸ್ಸಿನವನನ್ನು ಮದುವೆಯಾಗಬೇಕಾಗಿ ಬರುತ್ತದೆ. ಈ ಕಾದಂಬರಿಯು ಪುರುಷ ಪ್ರಧಾನವಾದ ಕುಟುಂಬಗಳು, ವರದಕ್ಷಿಣೆ, ಮತ್ತು ಇತರ ಸಾಮಾಜಿಕ ಅನಿಷ್ಟಗಳನ್ನು ಕೇಂದ್ರಮಾಡಿಕೊಂಡು, ನಮ್ಮ ಸಮಾಜದ ನೈಜ ಚಿತ್ರಣವನ್ನು ನಮ್ಮ ಕಣ್ಣ ಬರುವಂತೆ ಮಾಡುತ್ತದೆ.
©2025 Book Brahma Private Limited.