ಈ ಪ್ರಪಂಚದಲ್ಲಿ ಹತ್ತು ರೈಲುಗಳು ಒಂದೇ ಸಲ ಓಡುವ ಸೇತುವೆಯನ್ನಾದರೂ ವೆಲ್ಡಿಂಗ್ ಮಾಡುವ ಪರಿಕರ ಇರುವುದೇನೋ! ಆದರೆ ಮುರಿದ ಎರಡು ಮನಸ್ಸುಗಳನ್ನು ಅಂಟಿಸುವ ಉಪಕರಣ ಇಲ್ಲ ಎಂಬುದನ್ನು ಲೇಖಕರು ಇಲ್ಲಿ ಹೇಳುತ್ತಲೇ ಜೀವನದ ವಾಸ್ತವ ಹಾಗೂ ವ್ಯಾಪಾರೀಕರಣವನ್ನು ತಿಳಿಸಿದ್ದಾರೆ- ಕಾದಂಬರಿಕಾರರು. ಸದಾ ನೂತನ ಪ್ರಯೋಗವೆಂಬಂತೆ ಆಯ್ಕೆ ಮಾಡಿಕೊಳ್ಳುವ ಅವರ ಕತಾಹಂದರ ಓದುಗರನ್ನು ಕುತೂಹಲದ ಅಂಚಿಗೆ ನಿಲ್ಲಿಸುತ್ತದೆ. ರಾಜಾ ಚೆಂಡೂರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE