ಮುಚ್ಚಿದ ಕಣ್ಣನ್ನು ತೆಗೆದ ದಕ್ಷಿಣಾಮೂರ್ತಿಗಳು “ಕೆಲವು ಸತ್ಯಗಳನ್ನು ಮನುಷ್ಯ ತಿಳಿದುಕೊಂಡಾಗ ದುಃಖ ಆಗೋಲ್ಲ. ಒಂದು ಸರ್ಟನ್ ಏಜ್ವರೆಗೂ ಮನುಷ್ಯ ಸಂಪಾದನೆ ಮಾಡಿಕೋತಾ ಹೋಗುತ್ತಾನೆ. ಆಮೇಲೆ ಕಳೆದುಕೊಳ್ಳೋದು ಷುರುವಾಗುತ್ತೆ, ಉಲ್ಲಾಸ, ಉತ್ಸಾಹ, ಯೌವನ, ಆರೋಗ್ಯ, ಮುಖ್ಯವಾಗಿ ಮಕ್ಕಳ ಮೇಲಿನ ಹಿಡಿತ, ಅಧಿಕಾರ... ಹೀಗೆ ಒಂದೊಂದಾಗಿ ದೂರವಾಗುತ್ತೆ. ಮನೆಯ ಜೀವಂತಿಕೆಯಂತಿದ್ದ ಶುಭ ಗಂಡನ ಮನ್ಗೆ ಹೋದ್ಲು. ಈಗ ನರಹರಿ ಹೆಂಡತಿಯ ಜೊತೆಯಲ್ಲಿ ಬೇರೆ ಹೋಗ್ತಾ ಇದ್ದಾನೆ. ಇದು ನನ್ನ, ನಿನ್ನ ಲೆಕ್ಕಾಚಾರದಲ್ಲಿ ಇತ್ತಾ?” ಕೇಳಿದಾಗ, ಸುಕನ್ಯ ಗಂಡನ ಎದೆಯಲ್ಲಿ ಮುಖವಿಟ್ಟು ಬಿಕ್ಕಿದರು.ಇಂತಹ ಹಲವು ಸತ್ಯಗಳ ಅಗರವೇ ಈ ಕಾದಂಬರಿ.
©2024 Book Brahma Private Limited.