‘ಪಾತಾಳಕ್ಕೆ ಪಯಣ’ ಜೂಲ್ಸ್ ವರ್ನ್ ಅವರ ‘ಜರ್ನಿ ಟು ದಿ ಸೆಂಟರ್ ಆಫ್ ದಿ ಅರ್ತ್’ (journey to the center of the earth) ಕೃತಿಯನ್ನು ಲೇಖಕ, ಟಿ.ಡಿ. ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೈಂಟಿಫಿಕ್ ಫಿಕ್ಷನ್..ನಿಗೂಢ ಲಿಪಿಯ ರಹಸ್ಯ ಸಂದೇಶದ ಬೆನ್ನತ್ತಿ, ಮೂವರು ಅಗ್ನಿಪರ್ವತದ ಅಗ್ನಿಬಿಲದ ಮೂಲಕ ಭೂಕೇಂದ್ರಕ್ಕೆ ಪ್ರಯಾಣಿಸಿ, ಭೂಗರ್ಭದೊಳಗೆ ನಡೆಸಿದ ವೈಜ್ಞಾನಿಕ ಅನ್ವೇಷಣೆಗಳು ಮತ್ತು ಎದುರಿಸಿದ ಭಯಾನಕ ಸನ್ನಿವೇಶಗಳ ಸಾಹಸಗಾಥೆ. ಇದು ಭೂಗರ್ಭದಾಳದ ರಮ್ಯ ಜಗತ್ತನ್ನು ದರ್ಶನ ಮಾಡಿಸುವ ಸುಂದರ ಕಥನ. ರೋಮಾಂಚನ ಕಾವ್ಯವೂ ಹೌದು. ಸುರಂಗ ಪ್ರಯಾಣದ ಅನೇಕ ಭೀಭತ್ಸ ಘಟನೆಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿರುವ ಅದ್ಭುತ ರಸಯಾತ್ರೆ ಕೂಡಾ.
ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...
READ MORE