60-70 ದಶಕದಲ್ಲಿ ಬಂಗಾಳಿ ಸಾಹಿತ್ಯ ದೇಶಾಂದ್ಯಂತ ಬೀರಿದ ಪ್ರಭಾವಕ್ಕೆ ಎಲ್ಲಾ ವರ್ಗದ ಸಾಹಿತಿಗಳು, ಓದುಗರೂ ಒಳಗಾಗಿದ್ದರು. ಬಂಗಾಳಿ ಭಾಷೆಯ ’ಬಿಮಲ್ ಮಿತ್ರ’ ಕಾದಂಬರಿಯನ್ನು ಎಸ್.ಕೆ. ರಮಾದೇವಮ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅಪರಾಧ ಪ್ರಜ್ಷೆಯನ್ನು ಹೊಂದಿದ ಕಥಾನಾಯಕನ ಒಳಸಂಘರ್ಷವನ್ನು ’ಮುಜ್ರಿಮ್ ಹಾಜಿರ್ ’ ಎಂಬ ಕಾದಂಬರಿ ತೆರದಿಡುತ್ತದೆ. ಪ್ರಸ್ತುತ ಕಾಲಘಟ್ಟದ ಸಾಮಾಜಿಕ ವಿವರಗಳನ್ನು ಒಳಗೊಂಡಿದೆ.
ಮನುಷ್ಯನ ಅಭಿವೃದ್ಧಿ ಮತ್ತು ಆತನ ನೈತಿಕ ಮೌಲ್ಯಗಳ ನಡುವಿನ ಸಂಕೀರ್ಣ ಸಂಬಂಧವು ಕಾಲ, ದೇಶಗಳನ್ನು ಮೀರಿದ್ದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಕಥಾನಾಯಕ ತನ್ನ ಪೂರ್ವಜರ ಪಾಪಕಾರ್ಯಗಳಿಗಾಗಿ ತಾನು ಪಸ್ಚಾತ್ತಾಪಪಡುವುದು ಈ ಕೃತಿಯ ಮುಖ್ಯಕಥಾವಸ್ತುವಾಗಿದೆ. ಮನುಷ್ಯ-ಅಭಿವೃದ್ಧಿ-ನೈತಿಕತೆ, ಸಾಮಾಜಿಕ ವಿವರಗಳ ಸೂಕ್ಷ್ಮ ಎಳೆಗಳನ್ನು ಒಳಗೊಂಡಿದೆ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಹೊರತರಲಾಗಿದೆ.
ಲೇಖಕಿ ರಮಾದೇವಮ್ಮ ಎಸ್. ಕೆ. ಅವರು ಮನಃಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ಧಾರೆ. ಪತ್ರಿಕೋದ್ಯಮದಲ್ಲೂ ಡಿಪ್ಲೊಮಾ ಮಾಡಿರುವ ಅವರು ನಿವೃತ್ತ ಉಪಕಾರ್ಯದರ್ಶಿ. ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ತಂದೆ ಕೃಷ್ಣರಾವ್ ಎಸ್. ಅವರ ‘ಹೊಂಬೆಳಕು’ ಕವನ ಸಂಕಲನ 2001ರಲ್ಲಿ ಪ್ರಕಟವಾಯಿತು. 'ಎಪ್ಪತ್ತರ ವಯಸು ಇಪ್ಪತ್ತರ ಮನಸು' ಕೃತಿಯಲ್ಲಿ ಅವರ ಆತ್ಮಕಥಾನಕ ಇದೆ. ರಾಗಭೈರವ, ಏಷ್ಯಾದ ಆಯ್ದ ಕಥೆಗಳು, ಗೋಡೆಗಳಿಂದ ಆಚೆ ಆಕಾಶ, ನಾಯಿಕಾ (ಕಾದಂಬರಿ), ರಷ್ಯನ್ ಆಯ್ದ ಕಥೆಗಳು (ಮಕ್ಕಳ ಕಥೆಗಳು), Prayer and other poerms (ಭಾಷಾಂತರ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ದೆಹಲಿ ಕನ್ನಡ ಸಮ್ಮೇಳನದಲ್ಲಿ ...
READ MORE