‘ಕಲಾರಾಧನೆ’ ಡಾ. ಕೊಂಡೂರು ವೀರ ರಾಘವಾಚಾರ್ಯರ ಕಾದಂಬರಿಯ ಕನ್ನಡಾನುವಾದ. ಮೂಲ ತೆಲುಗು ಕೃತಿಯನ್ನು ಲೇಖಕಿ, ಅನುವಾದಕಿ ಸರಿತಾ ಜ್ಞಾನಾನಂದ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ತೆಲುಗು ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟಸ್ಥಾನವನ್ನು ಗಳಿಸಿರುವ ಕೊಂಡೂರು ವೀರ ರಾಘವಾಚಾರ್ಯಲು ಅವರ ಬಹು ಜನಪ್ರಿಯ ಕಾದಂಬರಿ ಕಲಾರಾಧನೆ. ಹಲವು ವರ್ಷಗಳ ಕಾಲ ದಕ್ಷಿಣ ಭಾರತದ ಹನ್ನೆರಡು ವಿಶ್ವವಿದ್ಯಾನಿಲಯಗಳಲ್ಲಿ ಈ ಕೃತಿಯು ಪಥ್ಯಗ್ರಂಥವಾಗಿತ್ತು ಎಂಬುದು.ಈ ಕಾದಂಬರಿ ತೆಲುಗು ಸಾಹಿತ್ಯದಲ್ಲಿ ಗಳಿಸಿರುವ ಸ್ಥಾನವನ್ನು ಅರಿಯುವ ದಿಶೆಯಲ್ಲಿ ನೆರವಾಗುತ್ತದೆ. ಪ್ರಾರಂಭದಿಂದ ಅಂತ್ಯದವರೆವಿಗೂ ಅನುವಾದ ಎಂಬ ಅನುಮಾನಕ್ಕೆ ಅವಕಾಶ ನೀಡದಂತೆ ಲಲಿತವಾದ ಶೈಲಿಯಲ್ಲಿ ಸಾಗಿರುವ ಈ ಕಾದಂಬರಿಯು ಓದುಗರಿಗೆ ಮುದ ನೀಡುತ್ತದೆ. ಅದರೊಂದಿಗೆ ನಮ್ಮ ಪ್ರಾಚೀನ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುತ್ತದೆ.
ಸರಿತಾ ಜ್ಞಾನಾನಂದ ಅವರು ಮೂಲತಃ ಬೆಂಗಳೂರಿನವರು. ತಂದೆ- ಎನ್. ಆರ್. ನಂಜುಂಡಸ್ವಾಮಿ, ತಾಯಿ- ಸುಬ್ಬಮ್ಮ. 21-01-1943ರಲ್ಲಿ ಜನಿಸಿದ ಅವರು ಅಧ್ಯಾಪಕ ವೃತ್ತಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸರಿತಾ ಜ್ಞಾನಾನಂದ ಅವರು ಒಂದೂರಲ್ಲಿ ಒಬ್ಬ ನಿರ್ಮಲಾ, ಪರಿಪೂರ್ಣ, ತನ್ನ ಮೀನು-ತಾನಾದ, ಬೆಂಕಿ ಹೂ, ಪಾಕಿಸ್ತಾನದಲ್ಲಿ ಶಂಕರ್ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿಯೂ ಕೃಷಿ ಮಾಡಿರುವ ಅವರು ವಿದಾಯ, ವಿಷಗರ್ಭ, ಪ್ರಕೃತಿ ಸಂಶೋಧನೆ ಸೇರಿದಂತೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಜೊತೆಗೆ ಹೆಣ್ಣೆ ಹೆಚ್ಚು ಎಂಬ ನಾಟಕನ್ನು ರಚಿಸಿರುವ ಅವರು ಆಚಾರ್ಯಾಭಿವಂದನೆ, ಕಲಾರಾಧನೆ ...
READ MORE