‘ಬರ್ಲಿನ್ ಬಂದಿತು ಗಂಗೆಯ ತಡೆಗೆ’ ಭಾ.ದ. ಖೇರ ಅವರ ಕೃತಿಯ ಕನ್ನಡಾನುವಾದ. ಖ್ಯಾತ ಲೇಖಕ ಗೌರೀಶ ಕಾಯ್ಕಿಣಿ ಅವರು ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಹೈಡೆಲ್ ಬರ್ಗ್ ಇದು ಜರ್ಮನಿಯಲ್ಲಿ ಒಂದು ಪ್ರಸಿದ್ಧ ನಗರ, ಆ ಸ್ಥಳದಲ್ಲಿ ಈ ಕರುಣರಮ್ಮ ಕಥೆ ನಡೆಯಿತು. ಜರ್ಮನಿಯೊಳಗಿನ ಆ ನಗರಗಳನ್ನೂ ನಾನು ಕಣ್ಣಾರೆ ಕಂಡೆನು. ಯಾವ ಯಾವ ಸ್ಥಳಗಳಲ್ಲಿ ಈ ಕಾದಂಬರಿಯು ಘಟಿಸಿತೋ ಆಯಾ ಸ್ಥಳಗಳ ಛಾಯಾ ಚಿತ್ರವನ್ನು ನನ್ನ ಅಂತಃಕರಣದಲ್ಲಿ ಕೊರೆದಿಟ್ಟುಕೊಂಡೆ. ಭಾರತಕ್ಕೆ ಹಿಂದಿರುಗಿದ ಮೇಲೆ ಈ ಕಾದಂಬರಿ ಹೊಸತಾಗಿ ಆಕಾರ ತಾಳಿತು. ಸುಮಾರು 12 ವರ್ಷಗಳ ಹಿಂದೆ ಕೌಶಿಕರು ಕೇಸರಿಯಲ್ಲಿ ಬರೆದ ಉತ್ಕೃಷ್ಟ ಕಥೆಯನ್ನು ಓದಿದ್ದೆ, ಅಂದಿನಿಂದಲೂ ಈ ಕಾದಂಬರಿಯ ಕಲ್ಪನೆ ನನ್ನ ಮನಸ್ಸಿನಲ್ಲಿ ರೂಪಗೊಳ್ಳುತ್ತಿತ್ತು. ಈಗೇನು, ಆ ಕಾದಂಬರಿಯೊಳಗಿನ ಘಟನಾಸ್ಥಳಗಳನ್ನೂ ನಾನು ಪ್ರತ್ಯಕ್ಷ ಕಂಡೆನು. ಮತ್ತು ಈ ಚಕ್ಷುರ್ವೈ ಸತ್ಯಂ ಕಾದಂಬರಿ ಪ್ರತ್ಯಕ್ಷದಲ್ಲಿ ಅವತರಿಸಿತು. ಈ ಕಥೆ ನಿಜವಾಗಿಯೂ ಸತ್ಯ ಸೃಷ್ಟಿಯಲ್ಲಿ ನಡೆದಿರಬಹುದೇ ಕಪೋಲ-ಕಲ್ಪಿತ ಕಥೆಗಳಿಗಿಂತ ಸತ್ಯದ ಅನೇಕ ವೇಳೆ ಹೆಚ್ಚು ಅದ್ಭುತವಿರುತ್ತದೆ. ಪ್ರಸ್ತುತ ಕಾದಂಬರಿಯ ಕುರಿತು ಇಷ್ಟೊಂದು ನೆನಪಿನಲ್ಲಿ ಇಟ್ಟುಕೊಂಡರೂ ಸಾಕು ಎಂದಿದ್ದಾರೆ ಗೌರೀಶ ಕಾಯ್ಕಿಣಿ.
©2024 Book Brahma Private Limited.