ಹರ್ಮನ್ ಹೆಸ್ ಅವರ ಇಂಗ್ಲಿಷ್ ಕಾದಂಬರಿಯನ್ನು ಸೊಂದಲಗೆರೆ ಲಕ್ಷ್ಮೀಪತಿ ಅವರು ಕನ್ನಡಕ್ಕೆ ಅನುವಾಸಿದ್ದೇ -ಸಿದ್ದಾರ್ಥ. ಈ ಕಾದಂಬರಿಯು 1946ನೇ ಸಾಲಿನ ಸಾಹಿತ್ಯ ವಲಯದ ನೊಬೆಲ್ ಪ್ರಶಸ್ತಿ ವಿಜೇತ ಕೃತಿ. ಸಿದ್ಧಾರ್ಥನ ಇಡೀ ಜೀವನ ವೃತ್ತಾಂತವನ್ನೇ ಕಾದಂಬರಿಯಾಗಿಸಿದ್ದು ಮಾತ್ರವಲ್ಲ; ಆ ಮೂಲಕ, ಜೀವ-ಜೀವನ ಸಾರ್ಥಕತೆಗೆ ಸೂಕ್ತ ಮಾರ್ಗ ತೋರಿದ ಬುದ್ಧನ ಸಂದೇಶಗಳನ್ನುಸಾಹಿತ್ಯಕ ಮೌಲ್ಯವಾಗಿ ಎತ್ತಿ ಹಿಡಿಯಲಾಗಿದೆ.
ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...
READ MORE