ರಷ್ಯಾದ ರಾಷ್ಟ್ರೀಯ ಕವಿ ಎಂದು ರಷ್ಯನ್ನರು ಹೆಮ್ಮೆಯಿಂದ ಹೇಳಿಕೊಳ್ಳುವ ಅಲೆಗ್ಸಾಂಡರ್ ಪೂಷ್ಕಿನ್ನರ ಮಹತ್ವದ ಕೃತಿಗಳಲ್ಲಿ ಒಂದು. ಊರಾಲ್ ಪರ್ವತ ಪ್ರದೇಶಗಳ ಹಿನ್ನೆಲೆಯಲ್ಲಿ ನಡೆಯುವ ಈ ಕತೆಯಲ್ಲಿ ರೈತ ಬಂಡುಕೋರ ಪುಗಚೇವ್ ನ ಸಾಮ್ರಾಜ್ಞಿಯ ವಿರುದ್ಧದ ಬಂಡಾಯ, ಧೀರೋದ್ದಾತ ಪ್ರೇಮಿ ಗ್ರಿನೋವ್, ಸಾಮ್ರಾಜ್ಞಿಗೆ ನಿಷ್ಠನಾದ ಕ್ಯಾಪ್ಟನ್ ಮುಖ್ಯ ಪಾತ್ರಗಳು. ಕ್ಯಾಪ್ಟನ್ನನ ಮಗಳೂ, ಮತ್ತು ಗ್ರಿನೋವ್ನ ಮನದನ್ನೆಯೂ ಆದ ಮಾಷಾ ಈ ನೀಳ್ಗತೆಯ ಕೇಂದ್ರಬಿಂದು.
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ (ಜನನ: 06-05-1948) ಲಾಯಲಾಪುರ ಗ್ರಾಮದವರು. ಸಾಹಿತ್ಯ, ತತ್ವಶಾಸ್ತ್ರ, ಸಿನಿಮಾಕಲೆ, ಅನುವಾದ ಮತ್ತು ಎಡಪಂಥೀಯ ರಾಜಕೀಯದಲ್ಲಿ ಗಂಭೀರ ಆಸಕ್ತಿ. ‘ಆನೆ ಬಂತೊಂದಾನೆ’ (ಜಾನಪದ ಶಿಶುಗೀತೆಗಳು) ‘ಕನ್ನಡ ಕಲಿಯಿರಿ’ ( ವಯಸ್ಕರ ಶಿಕ್ಷಣ) ‘ನಿರಂತರ’ (ಸಾಹಿತ್ಯ ವಿಮರ್ಶೆ) ‘ಗಾಂಪ ಮಂಡಲ’ (ವಿಡಂಬನೆ) ‘ಕ್ಯಾಪ್ಟನ್ನನ ಮಗಳು’ (ಅನುವಾದ) ‘ಎರಡು ಕಣ್ಣು ಸಾಲದು’ (ಸಿನಿಮಾ ಕಲಾಮೀಮಾಂಸೆ) 'ಶ್ರಮಶೋಷಣೆಯ ವಿಶ್ವವನ್ನು ಬದಲಾಯಿಸಬೇಕು!' (ಸಹ ಅನುವಾದ) ಪ್ರಕಟಿತ ಕೃತಿಗಳು. ಮಾರ್ಕ್ಸ್ ನ ‘ಕ್ಯಾಪಿಟಲ್’ ಕೃತಿಯ ಅನುವಾದ ಕಾರ್ಯದಲ್ಲಿ ಇತರರೊಂದಿಗೆ ಸಹಯೋಗ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸ. ...
READ MORE