ಬೇಲಿ, ಕ್ಷಿತಿಜದೆಡೆಗೆ ಮತ್ತು ಪ್ರೀತಿ ಅರಳಿತು ಎಂಬ ಮೂರು ಕಾದಂಬರಿಗಳನ್ನು ಒಳಗೊಂಡಿರುವ ಪುಸ್ತಕ.
1991 ರಲ್ಲಿ ಬರೆದ ಬೇಲಿ ಕಾದಂಬರಿಯು 2003ರ ಸೆಪ್ಟೆಂಬರ್ ’ರಾಗ ಸಂಗಮ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. 1990ರಲ್ಲಿ ರಚಿಸಿದ ’ಕ್ಷಿತಿಜದೆಡೆಗೆ’ ಕಾದಂಬರಿಯು 2004ರ ಸೆಪ್ಟೆಂಬರ್ ’ನವರಾಗಸಂಗಮ’ ಮೊದಲು ಮುದ್ರಣ ಕಂಡಿತ್ತು. 1976 ರಲ್ಲಿ ಬರೆದ ಕಾದಂಬರಿ 'ಪ್ರೀತಿ ಅರಳಿತು' 2005ರ ಫೆಬ್ರುವರಿ ,ಮಾರ್ಚ್ ’ ರಾಗಸಂಗಮ’ ಪತ್ರಿಕೆಯಲ್ಲಿ ಮುದ್ರಣವಾಗಿತ್ತು. ಬೇಲಿ ಕಾದಂಬರಿಯು ಸಮಾಜ ಮತ್ತು ವ್ಯಕ್ತಿಗತವಾಗಿ ಬಿಗಿದುಕೊಳ್ಳುವ ಬೇಲಿ ಸಂಕೋಲೆಯ ತೆಳುವಾದ ಚಿತ್ರಣ ನೀಡುತ್ತದೆ. ಕ್ಷಿತಿಜದೆಡೆಗೆ ಕಾದಂಬರಿ ಸುಖವನ್ನು ಅರಸುತ್ತಾ ಮೂಲದ ಅರಿವಿನೊಂದಿಗೆ ಹೊರಳುವ ಸ್ತ್ರೀಯೋರ್ವಳ ತಾಕಲಾಟದ ಪರಿಯನ್ನು ತೆರೆದಿಡುತ್ತದೆ. ಪ್ರೀತಿ ಅರಳಿತು ಕಾದಂಬರಿಯು ಲೇಖಕರು ಕಾಲೇಜ್ ದಿನಗಳಲ್ಲಿ ಬರೆದ ಕಾದಂಬರಿ. ತಾಯಿ ಪ್ರೀತಿಯ ಕಲ್ಪನೆಯಲ್ಲಿ ಕನಸಿನ ಲೋಕದಲ್ಲಿ ವಿಹರಿಸುವ, ಕಾಮದ ಸ್ವರೂಪದ, ವಿದ್ಯಾರ್ಥಿ ಜೀವನದ ಮೆಟ್ಟಿಲುಗಳ ಪರಿಚಯ ನೀಡುತ್ತದೆ.
©2024 Book Brahma Private Limited.