ಡಾಂಟೆ ಮಹಾಕವಿಯ ‘ದಿ ಡಿವೈನ್ ಕಾಮಿಡಿ’ಯ ಮೂರನೇ ಭಾಗವಾದ ದಿ ಪ್ಯಾರಡಿಸೊವನ್ನು ಪ್ರೊಫೆಸರ್ ಕೆ.ಎಂ ಸೀತಾರಾಮಯ್ಯ ಅನುವಾದಿಸಿದ್ದಾರೆ.
ವಿಶ್ವ ರಚನಾಕ್ರಮದಲ್ಲಿ ತನ್ನ ಕಾಲದ ಅನೇಕರಂತೆ ಟಾಲೆಮಿಯ ಸಿದ್ದಾಂತವನ್ನು ಒಪ್ಪಿಕೊಂಡವನು. ಅದರಂತೆ ಭೂಮಿಯೇ ವಿಶ್ವದ ಕೇಂದ್ರ ಅದರ ಸುತ್ತ ಅದನ್ನು ಒಳಗೊಂಡಂತೆ ಏಕಕೇಂದ್ರಿತವಾದ ಒಂಬತ್ತು ಗೋಳಗಳು ತಿರುಗುತ್ತಿವೆ. ಭೂಲೋಕದಿಂದ ಮೇಲೇರಿದಂತೆ ಕ್ರಮವಾಗಿ ಚಂದ್ರಲೋಕ, ಬುಧಲೋಕ, ಶುಕ್ರಲೋಕ, ಸೂರ್ಯಲೋಕ, ಮಂಗಳಲೋಕ, ಗುರುಲೋಕ, ಶನಿಲೋಕ ಆಮೇಲೆ ತಾರಾಲೋಕ ಅದರ ಮೇಲೆ ಒಂಬತ್ತೆಯದಾಗಿ ಸ್ಫಟಿಕ ಲೋಕ ಇವೆ. ಇವುಗಳ ಹಿನ್ನೆಲೆಯಲ್ಲಿ ವಿಶ್ಲೇಷಣೆಗಳನ್ನು ನೀಡುತ್ತಾ ವೈಜ್ಞಾನಿಕ ಸಿದ್ದಾಂತಗಳ ಅರಿವು ಮೂಡಿಸುವ ಕೃತಿ ’ಡಿವೈನ್ ಕಾಮಿಡಿ 3’.
ಕೆ.ಎಂ.ಸೀತಾರಾಮಯ್ಯನವರು 1929 ಅಕ್ಟೋಬರ್ 10ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೆಂಪಸಾಗರದಲ್ಲಿ ಜನಿಸಿದರು. ತಾಯಿ ವೆಂಕಟಲಕ್ಷ್ಮಮ್ಮ, ತಂದೆ ಕೆ.ಮೈಲಾರಯ್ಯ. ಅರಸೀಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸೀತಾರಾಮಯ್ಯನವರು ಹಾಸನದಲ್ಲಿ ಇಂಟರ್ ಮೀಡಿಯೇಟ್ ಶಿಕ್ಷಣ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲದಿಂದ ಸ್ನಾತಕೋತ್ತರ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ರಾಜ್ಯದ ನಾನಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರು 2023 ನ. 20 ರಂದು ನಿಧನರಾದರು. ಸೀತಾರಾಮಯ್ಯನವರ ಪ್ರಮುಖ ಕೃತಿಗಳೆಂದರೆ ಸಪ್ತಸ್ವರ, ಮಾನಸಪೂಜೆ, ರಾಜರಹಸ್ಯ, ಸಂನ್ಯಾಸಿ, ಇಲಿಯಡ್ ಮತ್ತು ಒಡಿಸ್ಸಿಗಳನ್ನು ಕನ್ನಡಕ್ಕೆ ...
READ MORE