ಈ ಕಾದಂಬರಿಯಲ್ಲಿ ಮೂಡಿ ಬರುವ ಈಶಾನ್ಯ ಎಂಬ ಸುಂದರವಾದ ಹೆಸರು,ಆ ಹೆಸರಿಗೆ ತಕ್ಕಂತೆ ಅವಳ ವ್ಯಕ್ತಿತ್ವವೂ ಕೂಡ ಮೂಡಿಬಂದಿದೆ .ಶರಾವತಿ ಮತ್ತು ದಿವಾಕರ್ ಪಾತ್ರ, . ಎಲ್ಲಾ ನೊಂದ ತಂಗಿಯರಿಗೆ ಖಂಡಿತ ದಿವಾಕರ್ ಅಂಥ ಅಣ್ಣನ ಅವಶ್ಯಕತೆ ಇದೆ. ಇದರಲ್ಲಿ ಇನ್ನೊಂದು ಸುಂದರವಾದ ಪಾತ್ರ ರೇವಂತ್.ಅವನ ಮಾತು,ಸಹಜ ನಡವಳಿಕೆ ಎಲ್ಲರೊಡನೆ ಬೆರೆಯುವ ಅವನ ಸ್ವಭಾವ ಮೆಚ್ಚುವಂತಹುದು, ಈ ಎಲ್ಲಾ ಪಾತ್ರಗಳು ಇಲ್ಲಿ ಸೊಗಸಾಗಿ ಮೂಡಿಬಂದಿವೆ.ಈಶಾನ್ಯ ಬೆಳದಿದ್ದೆಲ್ಲ ಸೋದರಮಾವನ ಮನೆಯಲ್ಲಿ. ಅತ್ತೆ, ಮಾವ ಮತ್ತು ಅವರ ಮಕ್ಕಳ ಪ್ರೀತಿಯಲ್ಲಿ ಬೆಳೆದ ಈಶಾನ್ಯಳು ,ತಾನು ತಾಯಿಯಿಂದ ದೂರವಿದ್ದೇನೆ ಎನ್ನುವ ಭಾವನೆ ಕೂಡ ಮೂಡುವುದಿಲ್ಲ. ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಮುಗಿದ ಬಳಿಕ ದಿವಾಕರ್ ,ಬೆಂಗಳೂರಿನಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಮಾಧವಿಯ ಬಳಿ ಕಳಿಸಿ ನಿನ್ನ ಮುಂದಿನ ವಿದ್ಯಾಭ್ಯಾಸ ತಾಯಿಯ ಬಳಿಯಲ್ಲೇ ಎಂದು ತಿಳಿಸಿ ಕಳಿಸುತ್ತಾನೆ..ದಿವಾಕರ್ ಗೆ ತನ್ನ ಜೀವನದಲ್ಲಿ ಮೊದಲ ಸ್ಥಾನ ತಂಗಿಯದು,ನಂತರ ಹೆಂಡತಿ ಮಕ್ಕಳು, ಕಷ್ಟವಾದರೂ ಇದನ್ನು ಒಪ್ಪಿಕೊಂಡಿದ್ದರು ಶರಾವತಿ.ತಂಗಿಯ ಕಷ್ಟದಲ್ಲಿ ನೆರವಾಗಿದಲ್ಲದೆ,ಸ್ವಾವಲಂಬನೆ ಯಿಂದ ಬದುಕಲು ಕಲಿಸಿರುತ್ತಾರೆ ದಿವಾಕರ್.ತಾಯಿ ಮಗಳ ಜೀವನ ಶುರುವಾಗುತ್ತದೆ. ಇಬ್ಬರಿಗೂ ತಾವು ಕಳೆದುಕೊಂಡಿದ್ದು ಎಷ್ಟು,ಒಬ್ಬರಿಗೊಬ್ಬರು ಹೇಗೆ ಇಷ್ಟು ದಿನ ಬಿಟ್ಟಿದ್ದೆವು ಎನ್ನುವ ಭಾವನೆ ಮೂಡುತ್ತದೆ. ಈಶಾನ್ಯಳಲ್ಲಿ ಹಲವಾರು ಪ್ರಶ್ನೆ, ಆದರೆ ಮಾವನ ಎಚ್ಚರಿಕೆಯನುಡಿ,ನೀನು ಮಾಧವಿಯನ್ನು ಯಾವುದೇ ಪ್ರಶ್ನೆ ಕೇಳಬಾರದು,ನಿನಗೆ ಉತ್ತರಗಳು ಅವಾಗೆ ಅನಾವರಣಗೊಳ್ಳುತ್ತವೆ ಎಂದು ಮಾವನು ಎಚ್ಚರಗೊಳಿಸುವ ಬಗೆ.ಈಶಾನ್ಯಳ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಾದಂಬರಿಯಲ್ಲಿ ಮೂಡಿಬಂದಿವೆ..
©2024 Book Brahma Private Limited.