ಮಿಮಿ ಬೇರ್ಡ್ ಬರೆದ ’ಹಿ ವಾಂಟೆಂಡ್ ದಿ ಮೂನ್’ ಕೃತಿಯನ್ನು ಕನ್ನಡಕ್ಕೆ ಲೇಖಕಿ, ಅನುವಾದಕಿ ಪ್ರಜ್ಞಾ ಶಾಸ್ತ್ರಿ ’ಚಂದಿರ ಬೇಕೆಂದವನು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಇದು ಅವರ ಮೊದಲ ಅನುವಾದಿತ ಕೃತಿ
ಎರಡು ತಲೆಮಾರುಗಳ ನಡುವಿನ ದುರಂತ ಕೊಂಡಿಗಳನ್ನು ಬೆಸೆಯುವ ಕೃತಿಯಿದು. ತಂದೆಯು ಪ್ರಸಿದ್ದ ವೈದ್ಯನಾಗಿದ್ದರೂ, ತಾಯಿಉ ಕೆಲವು ಕಠಿಣ ನಿರ್ಧಾರಗಳಿಂದ ಆತನ ಪರಿಚಯವೇ ಇಲ್ಲದಂತೆ ಮಗಳು ಮಿಮಿ ಬೇರ್ಡ್ ಬೆಳೆಯುತ್ತಾಳೆ. ಮನೋರೋಗಿಯಾಗಿದ್ದ ಅಪ್ಪನ ದುರಂತ ಜೀವನವು ಆಕೆಯೆದುರು ತೆರೆದುಕೊಳ್ಳುತ್ತದೆ. ಅವನ ಬವಣೆಗಳ ವಿವರಗಳು ಅನಾವರಣಗೊಳ್ಳುತ್ತಾ ಸಾಗುವ ವಸ್ತುವನ್ನು ಈ ಕೃತಿ ಓದುಗರಿಗೆ ಪರಿಚಯಿಸುತ್ತದೆ.
ಕವಿ, ಲೇಖಕಿ ಪ್ರಜ್ಞಾ ಶಾಸ್ತ್ರಿ ಅವರು ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರು. ಪ್ರಸ್ತುತ ಕೀನ್ಯದ ನೈರೊಬಿಯಾದಲ್ಲಿ ವಾಸ. ಸಾಹಿತ್ಯದಷ್ಟೇ ಫೋಟೋಗ್ರಫಿ ಮೇಲೂ ಒಲವು ಇವರದ್ದು. ಮಿಮಿ ಬೇರ್ಡ್ ಅವರ ‘ಹಿ ವಾಂಟೆಂಡ್ ದಿ ಮೂನ್’ ಕೃತಿಯನ್ನು ‘ಚಂದಿರ ಬೇಕೆಂದವನು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE