ಮೃತ್ಯುದುರ್ಗ

Author : ಕೆ.ಎಸ್. ಕರುಣಾಕರನ್

Pages 222

₹ 152.00

Synopsys

ಕೆ.ಎಸ್.ಕರುಣಾಕರನ್ ಅವರ ಅನುವಾದಿತ ಕಾದಂಬರಿ ಮೃತ್ಯುದುರ್ಗ. ಮೂಲ ಲೇಖಕರು : ಬ್ಯಾಟನ್ ಬೋಸ್. ದೊಡ್ಡ ಕಾಫಿ ಎಸ್ಟೇಟ್ ಮಾಲಿಕ ಮಾಧವ ಆತನ ಮಕ್ಕಳು ಮಧು.ಮೇನಾಕ ಹಾಗು ಚಂದ್ರು. ವಿದೇಶದಲ್ಲಿ ಓದಿ ತಾಯ್ನಾಡಿಗೆ ಬಂದ ಚಂದ್ರುವಿಗೆ ಮಾಧವ ಎಸ್ಟೇಟಿನ ವ್ಯವಹಾರವನ್ನು ಕೋಡಬೇಕೆಂದು ಇರುವಾಗಲೆ ಆಚಾನಾಕ್ಕಾಗಿ ಚಂದ್ರುವಿನ ಕೊಲೆಯಾಗುತ್ತದೆ.ಅಲ್ಲಿಂದ ಮುಂದೆ ಮೇನಾಕ ಎಸ್ಟೇಟಿನಲ್ಲಿ ಒಂದೊಂದು ಕೊಲೆಯಾಗುತ್ತದೆ. ಕೊಲೆ ಕಂಡು ಹಿಡೆಯಲು ಬಂದ ಕೆಲ ಪೋಲಿಸ್ ಆಫಿಸರ್ ಕೂಡ ಕೊಲೆಯಾಗುತ್ತಾರೆ. ಇನ್ಸ್ಪೆಕ್ಟರ್ ಜೋಷಿ.ನರೆಂದ್ರನ್ ಹಾಗೂ ಡಾಕ್ಟರ್ ಪ್ರಾಣ್ ಅವರಿಗೂ ಇದೂ ತಲೆ ನೋವಿನ ಸಂಗತಿ. ಇವರೆಲ್ಲ ಸೇರಿ ಎಸ್ಟೇಟಿನಲ್ಲಿ ನಡೆಯೊ ಕೊಲೆ ಕಂಡು ಹಿಡಿಯುತ್ತಾರೆ..

About the Author

ಕೆ.ಎಸ್. ಕರುಣಾಕರನ್
(10 November 1933)

ಕನ್ನಡ ಮತ್ತು ಮಲೆಯಾಳಂ ಸಾಹಿತ್ಯದ ಕೊಂಡಿಯಂತೆ ಭಾಷೆಗಳನ್ನು ಬೆಸೆದ ಲೇಖಕ ಕರುಣಾಕರನ್. ಕೇರಳದ ತಲಚೇರಿಯವರು. ಅವರು ಹುಟ್ಟಿದ್ದು ಬೆಳೆದದ್ದು ಕೊಡಗಿನ ವಿರಾಜಪೇಟೆಯಲ್ಲಿ. ತಂದೆ ಕಲ್ಲಿಶಂಕರನ್. ತಾಯಿ- ಶ್ರೀಮತಿ. ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಓದಿದ ನಂತರ ಬಿ.ಎ. ಆನರ್ಸ್ ಓದಲು ಮೈಸೂರಿಗೆ ಬಂದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎ. ಪದವೀಧರರು. ಲಕ್ಷ್ಮೀನಾರಾಯಣ ಭಟ್ಟ, ಅ.ರಾ.ಮಿತ್ರ, ಹಂಸನಾಗರಾಜಯ್ಯ, ಕಮಲ ಹಂಪನಾ, ಜಿ. ಪರಶಿವಮೂರ್ತಿ, ಪಾ.ಶ. ಶ್ರೀನಿವಾಸ್ ಮುಂತಾದವರ ಒಡನಾಟದಲ್ಲಿ, ಸಾಹಿತ್ಯ ಚರ್ಚೆಯಲ್ಲೇ ಬೆಳೆದ ಕರುಣಾಕರನ್‌ವರಿಗೆ ಸಾಹಿತ್ಯದ ಗೀಳು ಹಿಡಿದಿದ್ದು ಹೆಚ್ಚೇನಲ್ಲ. ಮಾತೃ ಭಾಷೆ ಮಲೆಯಾಳಂ ಕೂಡಾ ಬರುತ್ತಿದ್ದು, ...

READ MORE

Related Books