ಇಂದು ಮನುಷ್ಯ ಟೆಕ್ನಾಲಜಿ ಅಧೀನನಾದರೆ ಏನೆಲ್ಲ ಅವಘಡಗಳು ಸಂಭವಿಸುತ್ತದೆ. ಜೀವನದಲ್ಲಿ ನಿಜವಾದ ಆನಂದ ಸಿಗುವುದು ಸಂಗೀತ, ಸಾಹಿತ್ಯ ಮತ್ತು ಸಿನೆಮಾಗಳು ಎಂಬುದನ್ನು ರೋಚಕತೆಯ ಮೂಲಕ ಕಾದಂಬರಿಕಾರರು ಕಟ್ಟಿಕೊಟ್ಟಿದ್ದಾರೆ. ‘ನೀನು ಗೆಲ್ಲಬೇಕು.... ಒಂದೊಂದೇ ಗೋಲು ಹೊಡೆಯುತ್ತಾ. .. ಜೀವನ ಎನ್ನುವ ಕಾಲ್ಚೆಂಡಾಟದಲ್ಲಿ’, ‘ತಪ್ಪನ್ನು ತಕ್ಷಣವೇ ಹಿಡಿಯಲು ಆತುರ ಪಡುವ ಜನ, ಒಪ್ಪನ್ನು ಅಷ್ಟು ಬೇಗ ಒಪ್ಪಿಕೊಳ್ಳರು’ ಮುಂತಾದ ಸಾಲುಗಳಿಂದ ಓದುಗರನ್ನು ಸೆಳೆಯುವ ಪ್ರೇರಣಾತ್ಮಕ ಕೃತಿ ಯಂಡಮೂರಿ ವೀರೇಂದ್ರನಾಥರು ತೆಲುಗಿನಲ್ಲಿ ಬರೆದ ಈ ಕೃತಿಯನ್ನು ವಂಶಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.