‘ಬೇಗುದಿ’ ಕೃತಿಯು ಕಿರಣ್ ನಗರ್ ಕರ್ ಅವರ ಕಾದಂಬರಿಯಾಗಿದೆ. ಆರ್. ಲಕ್ಷ್ಮೀನಾರಾಯಣ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಅನುವಾದಕನ ಅರಿಕೆ ಹೀಗಿದೆ : ಕೇಂದ್ರ ಸಾಹಿತ್ಯ ಅಕಾಡೆಮಿ, ಖ್ಯಾತ ಇಂಗ್ಲಿಷ್, ಮರಾಠಿ ಲೇಖಕ ಕಿರಣ್ ನಗರ್ ಕರ್ ಅವರ ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ಕಕೋಲ್ಟ್’ ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಐತಿಹ್ಯ ಮತ್ತು ಜನಪದ ವೃತ್ತಾಂತಗಳನ್ನು ಬಳಸಿಕೊಂಡು ಇತಿಹಾಸದ ಭಿತ್ತಿಯ ಮೇಲೆ ಲೇಖಕ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಭಾರತೀಯ ಇತಿಹಾಸದ ಪ್ರಕ್ಷುಬ್ಧ ಕಾಲಘಟ್ಟವಾದ ಹದಿನಾರನೇ ಶತಮಾನದ ವಿಸ್ತೃತ ಐತಿಹಾಸಿಕ ಹಿನ್ನೆಲೆಯಲ್ಲಿ ರಚಿತವಾದ ಕೃತಿ ಇದಾಗಿದೆ. ಐತಿಹಾಸಿಕ ಸಂಗತಿಗಳು, ಸನ್ನಿವೇಶಗಳು ಮತ್ತು ಪಾತ್ರಗಳೊಂದಿಗೆ ಕಾಲ್ಪನಿಕ ಸಂಗತಿಗಳು ಮತ್ತು ಪಾತ್ರಗಳನ್ನು ಮೇಳೈಸಲಾಗಿದೆ. ಸಂತ ಮೀರಾಬಾಯಿಯ ಐತಿಹ್ಯವನ್ನು ಎತ್ತಿಕೊಂಡು, ಅವಳ ವ್ಯಕ್ತಿತ್ವದ ಪ್ರಭಾವಳಿಯಲ್ಲಿ ಮರೆಯಾಗಿ ಹೋಗಿ ನಾಮಮಾತ್ರವಾಗಿಬಿಟ್ಟಿದ್ದ ಮೇವಾಡದ ಮಹಾರಾಜ್ ಕುಮಾರ್ ನ ಹಾಗೂ ಮೀರಾಳ ವ್ಯಕ್ತಿತ್ವಗಳನ್ನು ಎಲ್ಲ ಸಂಕೀರ್ಣತೆಯೊಂದಿಗೆ ಕಟ್ಟಿಕೊಡುವ ಕೆಲಸವನ್ನು ಕಾದಂಬರಿಕಾರರ ಇಲ್ಲಿ ಮಾಡಿದ್ದಾರೆ.
©2024 Book Brahma Private Limited.