‘ದುಡಿಯಾ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ವಿಶ್ವಾಸ ಪಾಟೀಲ ಈ ಕೃತಿಯ ಮೂಲ ಲೇಖಕರಾಗಿದ್ದಾರೆ. ಛತ್ತಿಸಗಡದಲ್ಲಿ ನಡೆದಂತಹ ವಿಚಾರಗಳ ಕುರಿತು ‘ದುಡಿಯಾ’ ಮಾತನಾಡುತ್ತದೆ. ಒಮ್ಮೊಮ್ಮೆ ಕಲ್ಪಿತ ಮತ್ತು ಸತ್ಯವು ಒಂದೇ ನಾಣ್ಯದ ಎರಡು ಮುಖಗಳಾಗಿರುತ್ತವೆ. ಮತ್ತೆ ಕೆಲಮೊಮ್ಮೆ ವಾಸ್ತವದ ವ್ಯಕ್ತಿಚಿತ್ರ ಮತ್ತು ಘಟನೆಗಳು ಅವಾಸ್ತವದಂತೆ ಕಳಾಹೀನವಾಗಿರುತ್ತವೆ. ಆದರೆ ವಾಸ್ತವದ ವ್ಯಕ್ತಿ ಮತ್ತು ಘಟನೆಗಳ ಚಹರೆಯು ವಾಸ್ತವಕ್ಕಿಂತ ಹೆಚ್ಚು ಸತ್ಯ ಹೆಚ್ಚು ಒರಿಜನಲ್ ಆಗಿರುತ್ತದೆ ಎನ್ನುತ್ತದೆ ಈ ಕೃತಿ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE