ಆಸ್ಕರ್ ವೈಲ್ಡ್ ನ ಈ ಕಾದಂಬರಿಯ ಪ್ರಮುಖ ಪಾತ್ರಗಳ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಅನಾವರಣಗೊಳ್ಳುತ್ತದೆ. ಕಲೆ, ಸೌಂದರ್ಯ, ಕಲಾವಿದ, ಕಲೆಯ ವಸ್ತು, ಮುಂತಾದವುಗಳ ಬಗ್ಗೆ ಸ್ವಚಿಂತನೆಯ ಪರಿಕಲ್ಪನೆಗಳು, ಈ ಕೃತಿಯಲ್ಲಿ ಮುಖ್ಯವಾಗುತ್ತದೆ.
ಈ ಕಾದಂಬರಿಯಲ್ಲಿ ರೋಚಕತೆಯೂ ಇದೆ, ಅಷ್ಟೇ ದುರಂತವೂ ಇದೆ. ಮುಗ್ದತೆಯ ಮುಖವಾಡದ ಆಳದಲ್ಲಿ ಹುದುಗಿರಬಹುದಾದ ವಿಕೃತ ಆತ್ಮದ ದರ್ಶನವನ್ನು ಪಡೆದವನಿಗೆ, ತನ್ನ ಭಾವಚಿತ್ರವೇ ತನ್ನ ಆತ್ಮದ ಅಭಿವ್ಯಕ್ತ ರೂಪವೆಂದು ಭಾವಿಸಿದವನಿಗೆ ಅಂಥದ್ದನ್ನು ಸೃಷ್ಟಿಸಿದ ಕಲಾವಿದನನ್ನೇ ಕೊಲ್ಲುವ ಸಾಹಸಕ್ಕೆ ದೂಡುತ್ತದೆ.
ಸಂಭಾಷಣಾ ಚತುರತೆ, ತರ್ಕಬದ್ದ ವಿಷಯಗಳ ನಿರೂಪಣೆ, ವ್ಯಂಗ್ಯ, ಹಾಸ್ಯ, ಸಮರ್ಪಕವಾದ ಸನ್ನಿವೇಶ, ಸಂದರ್ಭಗಳ ನಿರ್ಮಾಣ ಸಾಮರ್ಥ್ಯಕ್ಕೆ ’ ಡೋರಿಯನ್ ಗ್ರೇನ ಭಾವಚಿತ್ರ’ ಕಾದಂಬರಿ ನಿದರ್ಶನವಾಗಿದೆ.
ಲೇಖಕರೂ, ಅನುವಾದಕರೂ ಆದ ವಿಜಯಾ ಸುಬ್ಬರಾವ್ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿ ಹೊರತಂದಿದ್ದಾರೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE