“ಅವಮಾನ, ಹಸಿವು, ವೇದನೆ, ಅಸಹಾಯಕತೆ, ದುಃಖ - ಇವೆಲ್ಲ ಸೋಪಾನಗಳು. ಇಳಿದರೆ ಕೆಳಕ್ಕೆ ಹೋಗುತ್ತೇವೆ! ಹತ್ತಿದರೆ ಮೇಲಕ್ಕೆ ಹೋಗುತ್ತೇವೆ!” “ಹುಲಿ ಬಂದಾಗ ಓಡಿಹೋಗೆಂದು ಜಿಂಕೆಮರಿಗೆ 'ಅನುಭವ' ಕಲಿಸುವುದಿಲ್ಲ” ಇಂತಹ ಜೀವನ ಪಾಠದಿಂದಲೇ ಓದುಗರನ್ನು ಆಕರ್ಷಿಸುತ್ತಾರೆ ಲೇಖಕ ಯಂಡಮೂರಿ ವೀರೇಂದ್ರನಾಥ್. ರಾಜಾ ಚೆಂಡೂರ್ ಅವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿ ಕೊನೆವರೆಗೂ ಓದುಗರನ್ನು ಕುತೂಹಲಕ್ಕೆ ತಳ್ಳುತ್ತದೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE