ದಿ. ಡೈರಿ ಆಫ್ ಯಂಗ್ ಎ ಗರ್ಲ್ ಆನ್ ಫ್ರಾಂಕ್

Author : ನಾಗರೇಖಾ ಗಾಂವಕರ

Pages 384

₹ 288.00

Buy Now


Year of Publication: 2021
Published by: ನೆಲೆ ಪ್ರಕಾಶನ ಸಂಸ್ಥೆ
Address: ಸಿಂದಗಿ, ಜಿಲ್ಲೆ ವಿಜಯಪುರ

Synopsys

ಲೇಖಕಿ ಪ್ರೊ. ನಾಗರೇಖಾ ಗಾಂವ್ಕರ್ ಅವರು ಕನ್ನಡಕ್ಕೆ ಅನುವಾದಿಸಿರುವ ಆನ್ ಫ್ರಾಂಕ್ ಅವರ ಆಂಗ್ಲ ಕಾದಂಬರಿ -ದಿ. ಡೈರಿ ಆಫ್ ಎ ಯಂಗ್ ಗರ್ಲ್. ನಾಜಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಅನ್ ಫ್ರಾಂಕ್ ಅವಳನ್ನು ಎರಡು ವರ್ಷಗಳ ಕಾಲ ಅಡಗಿಸಿಡಲಾಗಿರುತ್ತದೆ. ಹೊರಗೆ ನಾಜಿಗಳ ಆರ್ಭಟ, ಯುದ್ಧದ ಆರ್ಭಟ, ನರಳುವ ಜನ, ಹದಗೆಟ್ಟ ಸಾಮಾಜಿಕ ಸನ್ನಿವೇಶ ಇತ್ಯಾದಿಗಳನ್ನು ಅನ್ ಫ್ರಾಂಕ್ ಅವರು ದಿನಾಲು ದಾಖಲಿಸಿದ್ದೇ ಅವಳ ದಿನಚರಿಯ ಭಾಗವಾಗಿ  ಈ ಕಾದಂಬರಿ ರೂಪುಗೊಂಡಿದ್ದು, ವಿಶ್ವದಲ್ಲಿ ಈ ಕಾದಂಬರಿಯು ಅತ್ಯಂತ ಶಾಸ್ತ್ರೀಯವಾಗಿ ಬರೆದ ದಿನಚರಿ ಎಂಬ ಖ್ಯಾತಿ ಗಳಿಸಿದೆ. 

 

About the Author

ನಾಗರೇಖಾ ಗಾಂವಕರ

ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು.  ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ...

READ MORE

Reviews

’ದಿ ಡೈರಿ ಆಫ್ ಎ ಯಂಗ್ ಗರ್ಲ್’ ಕೃತಿಯ ವಿಮರ್ಶೆ

ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಸುಧಾರಿಸಿಕೊಳ್ಳಲೇ ಕೆಲವು ಘಳಿಗೆಗಳು ಬೇಕಾಗುತ್ತದೆ. ಈಗಾಗಲೇ ಜಗತ್ತಿನ ಎಪ್ಪತ್ತು ಭಾಷೆಗಳಿಗೆ ಅನುವಾದವಾಗಿರುವ ಇದನ್ನು ಬರೆದ ಲೈನ್ ಫ್ರಾಂಕ್ ಬದುಕಿದ್ದರೆ ಆಕೆಗೆ ತೊಂಬತ್ತೆರಡು ವರ್ಷ ಆಗಿರುತ್ತಿತ್ತು. ವಿಶೇಷವೆಂದರೆ, ತೊಂಬತ್ತೆರಡು ವರ್ಷ ಬದುಕಿದವರಿಗೂ ಇರುತ್ತದೆಂದು ದಿ ಡೈರಿ ಆಫ್ ದಿ ಯಂಗ್ ಗರ್ಲ್ ಕೃತಿಯನ್ನು ಜಗತ್ತಿನ ಅಚ್ಚರಿ ಎಂದು ಪರಿಗಣಿಸಬಹುದು. ಇದು ತೆರೆದು ತೋರುವ ಸಂಗತಿಗಳು ಒಂದೆರಡಲ್ಲ. ನಾಜಿಗಳಿಂದ ತಪ್ಪಿಸಿಕೊಂಡು ಎರಡು ವರ್ಷ ಇಲಿಗಳು ಬಿಲದಲ್ಲಿದ್ದಂತೆ ಗುಪ್ತವಾಸ ಅನುಭವಿಸಿದ ಎಂಟುಜನರ ಬದುಕಿನ ವಿವರ ಇಲ್ಲಿದೆ. ಆದರಿದು ಕೇವಲ ನಾಜಿಗಳ ಕೌರ್‍ಯವನ್ನು ಮಾತ್ರ ನಮಗೆ ತೋರಿಸುವುದಿಲ್ಲ. ಜೊತೆಗೇ ನಮ್ಮ ನಮ್ಮ ಅಂತರಂಗವನ್ನೇ ಮಗುಚಿ ಹಾಕಿಬಿಡುತ್ತದೆ. ಮನುಕುಲದ ಬದುಕಿನ ಗುರಿ ಏನು? ಎಂಬ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ. ಒಂದೆಡೆ ದ್ವೇಷದ ಪರಾಕಾಷ್ಠೆಯಲ್ಲಿ ಜಗತು ಮುಳುಗಿದ್ದರೆ, ಇನ್ನೊಂದೆಡೆ ಆ ದ್ವೇಷದ ಸಮಾನ ಫಲಾನುಭವಿಗಳು ಜೀವ ಉಳಿಸಿಕೊಳ್ಳುವ ಒಂದೇ ಉದ್ದೇಶದಲ್ಲಿ ಜೊತೆಗೇ ಬದುಕುತ್ತಿರುವಾಗಲೂ ಇರುವ ಹೊಂದಾಣಿಕೆಯ ಹಿಂಸೆಯನ್ನೂ ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಈ ಎರಡೂ ಮಗ್ಗುಲನ್ನು ಹೊಂದಿರುವುದೇ ಈ ಕೃತಿಯ ಅನನ್ಯತೆ ಮತ್ತು ಮಹತ್ವವಾಗಿದೆ. ಮನುಷ್ಯರು ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ, ಪರಸ್ಪರರನ್ನು ನಿಯಂತ್ರಿಸಲು ಪಯತಿಸುವುದರ ಪರಿಣಾಮವಾಗಿ ಅನಾವಶ್ಯಕ ಜಗಳ, ಅವಮಾನ, ಕಿರಿಕಿರಿಯಾಗುವುದನ್ನು ಈ ಚಿಕ್ಕ ಬಾಲೆ ಖಚಿತವಾಗಿ ಗುರುತಿಸುತ್ತಾಳೆ, 'ದೊಡ್ಡವರ' ಮೂರ್ಖ ನಿಲುವುಗಳ ಬಗೆಗೆ ಅವಳಿಗೆ ತೀವ್ರ ಆಕ್ಷೇಪಣೆಗಳಿವೆ. ದೊಡ್ಡವರು ಬಹಳ ಮೂರ್ಖ ಮತ್ತು ತಿಳಿಗೇಡಿಗಳು ಇರುತ್ತಾರೆಯೇ?” ಎನ್ನುತ್ತಾ ಮುಂದುವರಿಸುವ ಆಕೆ, “ಕೇವಲ ಪ್ರೇಮ ಮತು ಭಕ್ತಿ, ಶ್ರದ್ದೆ ಮಾತ್ರ ಪೀಟರ್, ಮಾರೋಟ್, ಎಲಿವೊಸನ್ ಮತು ನನನು ಈ ನಾಲು, ಜನರನ್ನು ಕಾಪಾಡಬಲ್ಲದು. ಆದರೆ ಅದು ನಮಗ್ಯಾರಿಗೂ ಇಲ್ಲಿ ಸಿಗದು. ಯಾರೂ ಕೂಡಾ, ವಿಶೇಷವಾಗಿ ಇಲ್ಲಿರುವ "ಮೂಢ ಸರ್ವಜ್ಞರು ನಮ್ಮನ್ನು 

ಅರ್ಥಮಾಡಿಕೊಳ್ಳರು. ಯಾಕೆಂದರೆ ನಮ್ಮನ್ನಿವರು ಬಹಳ ಸಂವೇದನಾಶೀಲರೆಂದು, ವಿಚಾರಗಳಲ್ಲಿ ಅವರೆಲ್ಲರಿಗಿಂತ ಬಹಳ ಮುಂದುವರೆದವರೆಂದು, ಇವರುಗಳು ಎಂದಿಗೂ ತಮ್ಮ ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾರರು. ಈ ಮಾತುಗಳನ್ನು ಕೇವಲ ವೈಯಕ್ತಿಕ ನೆಲೆಯಲ್ಲಷ್ಟೇ ಗುರುತಿಸದೆ, ಸಾಮುದಾಯಿಕ ನೆಲೆಯಿಂದಲೂ ಗುರುತಿಸಿದರೆ, ಇಡೀ ಜಗತ್ತಿನಲ್ಲಿ ನಡೆದು ಹೋದ ನಡೆಸಲು ಪ್ರಯತ್ನಿಸುತ್ತಿರುವ ಎಲ್ಲಾ ಹಿಂಸಾಮೂಲದ ಅಧಿಕಾರ ರಾಜಕಾರಣದ ಹಿಂದಿನ 'ಕುಲ್ಲಕತೆಯನ್ನು ಅರಿಯಬಹುದು. ಮತ್ತು ಎಲ್ಲ ವಿಘಟನೆಗಳ ಹಿಂದಿರುವ ಕಾರಣಗಳನ್ನು ಅರಿಯಬಹುದು. ಲೋಕದ ವ್ಯವಹಾರಗಳಿಂದ ದೂರವಿದ್ದೂ, ಕೇವಲ ಕಿಟಕಿಯಿಂದ ನೋಡಿದ ದೃಶ್ಯದಲ್ಲೇ ಅವಳು ಹೆಂಗಸರ ಕುರಿತು ಆಡುವ ಮಾತುಗಳು ಅಚ್ಚರಿ ಹುಟ್ಟಿಸುತ್ತದೆ: “ನಿಧಾನಕ್ಕೆ ನಾನು ಒಂದೇ ನೋಟದಲ್ಲಿ ಹೆಂಗಸರನ್ನು ತಿಳಿದುಕೊಳ್ಳುವುದನ್ನು ಕಲಿತೆ, ಬಟಾಟೆಯಂತೆ ಊದಿಕೊಂಡವರನ್ನು, ಕೆಂಪು ಅಥವಾ ಹಸಿರು ಕೋಟು ಧರಿಸಿರುವವರನ್ನು, ತುಳಿತಕ್ಕೊಳಗಾದ ಹಿಮ್ಮಡಿಯವರನ್ನು ಮತ್ತು ತಮ್ಮ ತೋಳುಗಳಲ್ಲಿ ಬ್ಯಾಗುಗಳನ್ನು ಹೊತ್ತ ಹೆಣ್ಣುಗಳನ್ನು ತಿಳಿದುಕೊಳ್ಳುವುದನ್ನು ಕಲಿತೆ. ಅವರ ಮುಖಗಳು ಅವರವರ ಗಂಡಂದಿರ ಮನೋಧರ್ಮಕ್ಕೆ ಅನುಗುಣವಾಗಿ ಒಂದೋ ಕ್ರೂರವಾಗಿ ಕಾಣುತಿದವು. ಇಲ್ಲ ಕರುಣಾಪೂರಿತವಾಗಿದ್ದವು.” ಇಂತಹ ಸೂಕ್ಷ್ಮ ನೋಟವೊಂದು ಸಮಾಜಕ್ಕೆ ಸಾಧ್ಯವಾಗುವುದೇ ಆದರೆ, ಆ ಸಮಾಜದ ರಾಚನಿಕ ವ್ಯವಸ್ಥೆಯ ಸ್ವರೂಪವೇ ಭಿನ್ನವಾಗುವುದರಲ್ಲಿ ಸಂಶಯವಿಲ್ಲ.

ವ್ಯಕ್ತಿನೆಲೆಯಲ್ಲಿ ಹುಟ್ಟುವ ಇಲ್ಲಿನ ಚಿಂತನೆಗಳು ಸಾಮುದಾಯಿಕ ನೆಲೆಯಲ್ಲಿ ವಿಸ್ತರಿಸುವುದು ಮತ್ತು ಒಂದರೊಡನೊಂದು ಹೊಂದಿರುವ ಸಂಬಂಧವನ್ನು ತನಗರಿವಿಲ್ಲದೇ ಓದುಗರಿಗೆ ತೋರುವುದು ಈ ಕೃತಿಯ ಹೆಗ್ಗಳಿಕೆ. ಆ್ಯನ್ ತನ್ನ ಮತ್ತು ಪೀಟರ್‌ನ ನಡುವೆ ಅರಳಿದ ಪ್ರೇಮದ ಕುರಿತು ತನ್ನ ಪೋಷಕರು ಹೇಗೆ ಯೋಚಿಸಬೇಕು ಎಂದು ಬಯಸುತ್ತಾಳೋ ಅದೇ ರೀತಿಯ ನಿಲುವನ್ನು ಯಹೂದಿಗಳ ಕುರಿತು ಸಮಾಜವು ಹೊಂದಿರಬೇಕು ಎಂದು ಭಾವಿಸುತ್ತಾಳೆ. ಅಂದರೆ, ತನ್ನ ಗುಪ್ತವಾಸದ ಬದುಕಿನಲ್ಲಿನ ಎಲ್ಲ ಏಕಾಂಗಿತನ, ಸಿಟ್ಟು, ಸೆಡವುಗಳನ್ನು ಮತ್ತೆ ಮತ್ತೆ ಪುನರ್ ಪರಿಶೀಲಿಸುತ್ತಾ ಅದನ್ನು ಬದುಕಿನೆಡೆಗಿನ ಆಶಾವಾದಕ್ಕೆ ತಿರುಗಿಸಿಕೊಳ್ಳುತ್ತಾ, ಅದನ್ನೂ ತಮಾಷೆಯ ಸಂಗತಿಯಾಗಿ ನಿರೂಪಿಸುತ್ತಾ ಮುನ್ನಡೆಯುವ ಆಕೆ, ನಾಲ್ಕು ಜನರು ಒಟ್ಟಿಗೆ ಇರುವಾಗ ಇದೆಲ್ಲ ಸಹಜ ಎಂದು ಹೇಳುತ್ತಲೇ, ನಮ್ಮನ್ನೂ ಯೋಚಿಸುವಂತೆ ಮಾಡುತ್ತಲೇ, ಸಮಾಜದಲ್ಲಿರುವ ಯಾವುದೇ ಒಂದು ಸಮುದಾಯ ಎಲ್ಲರಂತೆ ತಪ್ಪು ಒಪ್ಪುಗಳನ್ನು ಮಾಡುತ್ತದಲ್ಲವೇ? ಹಾಗಿದ್ದ ಮೇಲೆ ಯಹೂದಿಗಳೆಡೆಗೆ ಮಾತ್ರ ಯಾಕೆ ಅಸಹನೆ? ಎಂದು ಪ್ರಶ್ನಿಸುತ್ತಾಳೆ. “ಜರ್ಮನ್‌ರ ದಯೆಯಲ್ಲಿ ಬದುಕುತ್ತಿರುವ ಯಾವುದೇ ವ್ಯಕ್ತಿ ಆತ ಯಹೂದಿಯಾಗಿರಬಹುದು ಅಥವಾ ಕ್ರೈಸ್ತನಾಗಿರಬಹುದು, ಹಾಗೆಂದು ಆತ ಸದಾ ಸುಮ್ಮನೇ ಬದುಕಲು ಸಾಧ್ಯವೇ? ಎಲ್ಲವನ್ನೂ ಸಹಿಸುತ್ತಾ, ಮೂಕವಾಗಿ ಇರುವುದು. ಇದಂತೂ ಪ್ರತ್ಯಕ್ಷವಾಗಿ ಅಸಾಧ್ಯದ ಮಾತೆಂಬುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಹಾಗಿದ್ದ ಮೇಲೆ ಜನರೇಕೆ ಯಹೂದಿಗಳು ಹೀಗೆ ಇರಬೇಕೆಂದು ಬಯಸುತ್ತಾರೆ?” ಈ ಮಾತನು, ಭಾರತೀಯ ಮುಸ್ಲಿಮರ ಬಗೆಗೆ, ಪ್ಯಾಲೆಸ್ಟೈನರ ಬಗೆಗೆ ಅಥವಾ ಜಗತಿನ ಯಾವುದೇ ಅಲ್ಪಸಂಖ್ಯಾತರ ಬಗೆಗೂ ಕೇಳಿಕೊಳ್ಳಬೇಕಿದೆ.

ಅತ್ಯಂತ ಖಚಿತ ರಾಜಕೀಯ ನೋಟ ಆಕೆಗಿದೆ. ದೊಡ್ಡ ಜನರು, ರಾಜಕಾರಣಿಗಳು. ಬಂಡವಾಳಶಾಹಿಗಳಷ್ಟೇ ಸಾಮಾನ್ಯ ವ್ಯಕ್ತಿಗಳೂ ಯುದ್ಧಾಪರಾಧಿಗಳು ಎನುವ ಮನುಕುಲದ ನಾಶ ಮತ್ತು ಮರುಕಟುವಿಕೆಗಳ ಬಗ್ಗೆ ಮಾತಾಡುತ್ತಾಳೆ, ತಾನು ಬರಹ ಸತ್ತ ಮೇಲೂ ಬದುಕಬೇಕೆಂದು ಕನಸಿದೆ, ಗುಪ್ತವಾಸದ ಯಾತನೆಯನು, ಭವಿಕನಸಿನಲ್ಲಿ ಸಹಿಸಿದರೂ ಯಾತನಾಶಿಬಿರದಲ್ಲಿ ಕೊನೆಯಾದ ಈ ಪ್ರತಿಭೆ ಇಂದಿಗೂ ಡೈರಿಯ ಬರಹದಿಂದ ಜಗತ್ತನ್ನು ಪೊರೆಯಬಲ್ಲಳು, ಓದಿ ಅರಿತಲ್ಲಿ!

ಕೃತಿಯನ್ನು ಸಶಕ್ತವಾಗಿ ಕನ್ನಡಕ್ಕೆ ತಂದ ನಾಗರೇಖಾರಿಗೆ ಧನ್ಯವಾದಗಳು

(ಕೃಪೆ: ಹೊಸ ಮನುಷ್ಯ, ಬರಹ: ಸಬಿತಾ ಬನ್ನಾಡಿ)

Related Books