ಅಮೇರಿಕ ದೇಶದ ಖ್ಯಾತ ಬರಹಗಾರ ಜಿಮ್ ಸ್ಟೋವಾಲ್ ಬರೆದ ವಿಶಿಷ್ಟ ಕಾದಂಬರಿ ದಿ ಅಲ್ಟಿಮೃಟ್ ಗಿಫ್ಟ್ ನ ಕನ್ನಡಾನುವಾದವನ್ನು ಲೇಖಕ ಎ. ನರಸಿಂಹ ಭಟ್ಟ ’ಕೊನೆಯ ಕೊಡುಗೆ’ ಎಂಬ ಶೀರ್ಷಿಕೆಯಡಿ ತಂದಿದ್ದಾರೆ.
ದುರಹಂಕಾರಿಯಾದ ದುಡುಕಿನ ಸಿಡುಕಿನ ಜೇಸನ್ ಸ್ಟೀವನ್ಸ್ ತನ್ನ ದೊಡ್ಡಪ್ಪ ರೆಡ್ ಸ್ಟೀವನ್ಸ್ ತನಗೆ ಕೊಡಲು ಉದ್ದೇಶಿಸಿದ ಕೊನೆಯ ಕೊಡುಗೆಯನ್ನು ಪಡೆಯಲು ಮಾಡಿದ ಒಂದು ವರ್ಷಾವಧಿಯ ದೃಢ ಪ್ರಯತ್ನದ ಕಥೆಯಾಗಿದೆ. ಆದಿಯಲ್ಲಿ, ಗತಕಾಲದ ಧ್ವನಿ, ದುಡಿಮೆಯ ಹಿರಿಮೆ, ಹಣದ ಗುಣ, ಸ್ನೇಹ ಸಂಪತ್ತು, ಕಲಿಯುವಿಕೆಯ ಕೀಲಿಕೈ, ಸಮಸ್ಯೆಗಳ ಸವಾಲು, ಕುಟುಂಬ ಜೀವನ ಭಾಗ್ಯ, ನಗುವಿನ ಸೊಗಸು, ಕನಸು ನನಸು, ಕೊಡುವಿಕೆಯ ಘನತೆ, ಕೃತಜ್ಞತೆಯ ವಿಸ್ತಾರ, ಪ್ರೀತಿಯ ವೈಶಾಲ್ಯ, ಪ್ರತಿದಿನವೂ ಒಂದು ಕೊಡುಗೆ ಮುಂತಾದ ಅಧ್ಯಾಯಗಳು ಇಲ್ಲಿವೆ.
ಎ. ನರಸಿಂಹ ಭಟ್ಟರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದವರು. 1931 ಆಗಸ್ಟ್ 20 ರಂದು ಜನನ. ಕಾಸರಗೋಡಿನಲ್ಲಿ ವಾಸ್ತವ್ಯವಿದ್ದರು. ಬಿ.ಇ.ಬಿ.ಟಿ ಹೈಸ್ಕೂಲ್ ಅಧ್ಯಾಪಕ ಪ್ರಶಿಕ್ಷಣ, ಅಧ್ಯಾಪನ ವಿಷಯ ಇಂಗ್ಲಿಷ್ ಮತ್ತು ಸಾಮಾಜಿಕ ಅಧ್ಯಯನ ಮಾಡಿದ್ದರು. 1954 ಜೂನ್ ನಲ್ಲಿ ಸಹಾಯಕ ಹೈಸ್ಕೂಲು ಅಧ್ಯಾಪಕ ಸೈಂಟ್ ಜೋಸೆಫ್ಸ್ ಹೈಸ್ಕೂಲು ಬಜಪೆ, ಮುನಿಸಿಪಲ್ ಹೈಸ್ಕೂಲ್ ಹೊಸಪೇಟೆ, ಸೈಂಟ್ ಮೈಕಲ್ಸ್ ಹೈಸ್ಕೂಲು ಮಡಿಕೇರಿ, ಗವರ್ನ್‌ಮೆಂಟ್ ಹೈಸ್ಕೂಲು ಕಾಸರಗೋಡು ಹಾಗೂ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ...
READ MORE