"ಸನಾತನ" ಶರಣಕುಮಾರ ಲಿಂಬಾಳೆ ಅವರ ಮರಾಠಿ ಕಾದಂಬರಿಯಾಗಿದೆ. ಈ ಕಾದಂಬರಿಯನ್ನು ಕನ್ನಡಕ್ಕೆ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿದ್ದಾರೆ. "ಸನಾತನ" ಕಾದಂಬರಿಯಲ್ಲಿನ ಘಟನೆಗಳು ಯಾವುದೋ ಕಾಲದ್ದಲ್ಲ. ಇಂದಿಗೂ ಭಾರತದಲ್ಲಿ ಜೀವಂತವಾಗಿರುವಂಥವು, ಇದು ನಿರಾಕರಿಸಿದ ಅಂದಿನ ಚರಿತ್ರೆಯ ಉತ್ಪನನವಾಗಿದೆ. ನೂರಾರು ಜನರನ್ನು ನೂರಾರು ಮೈಲುಗಳವರೆಗೆ ಮತ್ತು ನೂರಾರು ವರ್ಷಗಳ ಕಾಲಕ್ಕೆ ವ್ಯಾಪಿಸಿಕೊಂಡಿರುವ ಕಾದಂಬರಿ. ಇದು ಕಲ್ಪನೆ ಹಾಗೂ ಚರಿತ್ರೆಯ ರಸಾಯನದಿಂದ ರೂಪಗೊಂಡ ಸತ್ಯದ ಒಂದು ಹೊಸ ಪ್ರಯೋಗವಾಗಿದೆ. ಶರಣಕುಮಾರ ಲಿಂಬಾಳೆಯವರ ಸನಾತನ ಕಾದಂಬರಿಯು ವ್ಯಾಪಕವಾದ ಸಾಮಾಜಿಕ ಅರಿವನ್ನು ತಂದು ಕೊಡುತ್ತದೆ. ಹೀಗಾಗಿ ಜಾತಿಯ ಸಂಕುಚಿತ ಪರಿಧಿಯೊಳಗೆ ಬದುಕುವ ಪ್ರತಿಯೊಬ್ಬರಿಗೂ ಇದು ಹರಿತವಾದ ಶಸ್ತ್ರದಂತೆ ಅನಿಸಬಹುದು. ಇದು ಶಸ್ತ್ರದ ಪೂಜೆಯಲ್ಲ, ಮನುಷ್ಯನ ಪ್ರಾರ್ಥನೆ ಎನ್ನುತ್ತದೆ, ಬೆನ್ನುಡಿ.
©2024 Book Brahma Private Limited.