ತಾಯಿ

Author : ನಿರಂಜನ

Pages 360

₹ 225.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

‘ತಾಯಿ’ ಮ್ಯಾಕ್ಸಿಂ ಗೋರ್ಕಿ ಅವರ ಇಂಗ್ಲಿಷ್ ಕಾದಂಬರಿಯ ಕನ್ನಡಾನುವಾದ. ಹಿರಿಯ ಲೇಖಕ ನಿರಂಜನ ಅವರು ಕನ್ನಡೀಕರಿಸಿದ್ದಾರೆ. 1906 ರಲ್ಲಿ ಮ್ಯಾಕ್ಸಿಂ ಗೋರ್ಕಿ ಬರೆದಿದ್ದ ಈ ಕಾದಂಬರಿ ಈತನಕವೂ ಜಗತ್ತಿನಲ್ಲಿ ಅತ್ಯಧಿಕ ಮಾರಾಟ ಕಂಡ ಕೃತಿ. ಈ ಕಾದಂಬರಿ ಪ್ರಪಂಚದ ಅನೇಕಾನೇಕ ಭಾಷೆಯಲ್ಲಿ ಅನುವಾದಗೊಂಡಿದೆ, ನಾಟಕವಾಗಿದೆ, ಸಿನಿಮಾ ಕೂಡಾ ಆಗಿದೆ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books