ಆಂಗ್ಲ ಲೇಖಕ ತುಹಿನ್ ಎ. ಸಿನ್ಹಾ ಅವರ ಕಾದಂಬರಿಯನ್ನು ಲೇಖಕ ಸೊಂದಲಗೆರೆ ಲಕ್ಷ್ಮಿಪತಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ -ಬಯಕೆಯ ಅಂಚು. ಈ ಕೃತಿಯು ಬರೀ ಕಾದಂಬರಿಯಲ್ಲ. ಇತಿಹಾಸವನ್ನು ಅದರೊಟ್ಟಿಗೆ ಬೆಳೆದು ಬಂದ ಸಾಮಾಜಿಕ ರಾಜಕೀಯ ವ್ಯವಸ್ಥೆಗಳನ್ನು ಕಟ್ಟಿಕೊಡುತ್ತದೆ. ಓದುಗರ ದೃಷ್ಟಿಕೋನವನ್ನು ವಿಸ್ತರಿಸುತ್ತದೆ. ಅಂತೆಯೇ ಅಂಕುರಾವಸ್ಥೆಯ ರಾಜಕಾರಣಿಗಳಿಗೆ ಈ ಕೃತಿಯ ಓದು ಪ್ರಾಯಶಃಸಾರ್ಥಕದ ಪಾವಟಿಗೆಗಳಾಗಬಹುದು. ಐಎಎಸ್ ಮಂದಿಯ ಮನೋಧರ್ಮ ಎಂಥಾದ್ದು?, ಧರ್ಮ ನಿರಪೇಕ್ಷತೆ ಕುರಿತಂತೆ ನಮ್ಮ ರಾಜಕಾರಣಿಗಳು ಪ್ರಾಮಾಣಿಕತೆ ಹೇಗಿದೆ? ನಮ್ಮ ದೇಶದಲ್ಲಿ ನಡೆಯುತ್ತಿರುವ ಮತಾಂತರದ ಕೃತ್ಯಗಳು, ದೇಶದ್ರೋಹಿ ಘಟನೆಗಳು, ಅಸಮಾನತೆ, ಅಸ್ಪೃಶ್ಯತೆ, ವರ್ಗ ಸಂಘರ್ಷ, ಮತಾಂಧತೆ, ಸ್ವಾತಂತ್ರೋತ್ತರ ಭಾರತದ ರಾಜಕೀಯ ಜಂಜಾಟಗಳು ಇತ್ಯಾದಿ ಅಂಶಗಳು ಕಥಾ ವಸ್ತುವಾಗಿ, ಓದುಗರನ್ನು ಸೆಳೆಯುತ್ತದೆ ಎಂದು ಅನುವಾದಕರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.