ಲೇಖಕ ಮೋಹನ ಕುಂಟಾರ್ ಅವರ ಮಲಯಾಳಂ ಭಾಷೆಯಿಂದ ಅನುವಾದಿತ ಕಾದಂಬರಿ-ಕುಂದಲತ. ಮೂಲ ಲೇಖಕರು ಅಪ್ಪು ನೆಡುಜಾಡಿ. ಪ್ರೇಮ ಮತ್ತು ಪ್ರಭುತ್ವದ ಮಧ್ಯೆ ಬಿಚ್ಚಿಕೊಳ್ಳುವ ಈ ಕಾದಂಬರಿಯು ಈ ಎರಡರ ಶ್ರೇಷ್ಠತೆಯನ್ನು ಹಾಗೂ ಪ್ರೇಮದ ಅತಿ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ. ವಿಷಯ ವಸ್ತುವಿನಲ್ಲಿ ಎರಡು ಪ್ರೇಮಕಥೆಗಳಿದ್ದು, ಯುದ್ಧ ವೃತ್ತಾಂತವೂ ಒಳಗೊಂಡಿದೆ. ಕುಂದಲತ ಎಂಬುದು ಮಲಯಾಳಂ ಸಾಹಿತ್ಯದ ಮೊದಲ ಕಾದಂಬರಿ ಎಂದೇ ಹೇಳಲಾಗುತ್ತಿದೆ. ಈ ಕಾದಂಬರಿಯ ವಿಷಯ ವಸ್ತು ಕಾಲ್ಪನಿಕ. ಆದರೆ, ಕಾಲಾತೀತವಾಗಿದೆ. ಸಾಹಿತಿ ಸಿ. ವೆಂಕಟೇಶ ಹಂಪಿ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಕಾದಂಬರಿ ಕುರಿತ ಪ್ರಸ್ತಾವನೆ ಮತ್ತು ಕಾದಂಬರಿ ಇವು ಲೇಖಕರ ಸಂಶೋಧನಾ ಪ್ರಜ್ಞೆ ಮತ್ತು ಅನುವಾದ ಸಾಮರ್ಥ್ಯವನ್ನು ಸಾಬೀತುಪಡಿಸುತ್ತವೆ. ಕನ್ನಡ ಓದುಗರಿಗೆ ಮಲಯಾಳಂನ ಮೊದಲ ಕಾದಂಬರಿಯ ಕುರಿತು ಪರಿಚಯವನ್ನು ಲೇಖಕರು ಸಮರ್ಥವಾಗಿ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.