‘ಅಳಬೇಡ ಕಂದ’ ನೊಬೆಲ್ ಪ್ರಶಸ್ತಿಗೆ ಸಮೀಪವಿರುವ ಪ್ರಖರ ಚಿಂತಕ, ಹೋರಾಟಗಾರ ಗೂಗು ವಾ ಥಿಯಾಂಗೋ ಅವರ ಮನೋಜ್ಞ ಕಾದಂಬರಿ weep not, child ಕೃತಿಯ ಕನ್ನಡಾನುವಾದ. ಡಾ. ಸಿ.ನಾಗಣ್ಣ ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ. ಈ ಕೃತಿಗೆ ರಾಜೀವ ತಾರಾನಾಥ ಅವರ ಬೆನ್ನುಡಿಯ ಬರೆಹವಿದೆ. ಸಾಹಿತ್ಯ ಅನುವಾದಗಳೇಕೆ ಇದೊಂದು ಮೂಲಭೂತ ಪ್ರಶ್ನೆ, ಏಕೆಂದರೆ, ಒಂದು ಕಾದಂಬರಿಯೊಳಗಿನ ಕಥೆ ಸುಲಭವಾಗಿ ಗುರುತಿಸಿಕೊಳ್ಳಬಹುದು ಇಡೀ ಕಾದಂಬರಿಯ ಅನುವಾದ ಶ್ರಮ ಬೇಕಿಲ್ಲ. ಇಂಥ ಪ್ರಶ್ನೆಗಳಿಗೆ ಜವಾಬು ಎನ್ ಗೂಗಿ ಕೃತಿ weep not, child ನ ಅನುವಾದದಲ್ಲಿ ಸಮಂಜಸವಾಗಿ ಹಿಡಿಯುವ ಪ್ರಶ್ನೆ ಯಾವಾಗಲೂ ಇದ್ದೇ ಇದೆ. ನಾಗಣ್ಣನವರು ಈ ದಿಕ್ಕಿನಲ್ಲಿ ಒಂದು ವಿಶಿಷ್ಟ ಪ್ರಯತ್ನ ಮಾಡಿದ್ದಾರೆ. ಈ ಕಾದಂಬರಿಯ ಒಂದು ಗ್ರಾಮ್ಯವನ್ನು ಕನ್ನಡದ ಒಂದು ಗ್ರಾಮ್ಯದಲ್ಲಿ ಹಿಡಿಯುವ ಪ್ರಯತ್ನ ಇದು ಅನುವಾದವೆಂಬ scienceಗೆ ನಾಗಣ್ಣನವರ ಕೊಡುಗೆ ಎನ್ನಬಹುದು. ಕಷ್ಟಸಾಧ್ಯ ಸಾಧನೆ. ಬಹಳ ಬೆಲೆ ಬಾಳುವಂಥದ್ದು ಎಂದಿದ್ದಾರೆ ರಾಜೀವ ತಾರಾನಾಥ.
ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...
READ MORE