'ಎನ್ನೇಬಿ' ಮೊಗ್ರಾಲ್ ಪುತ್ತೂರು ಅವರ ಕಾದಂಬರಿ ಚಂದ್ರವಲ್ಲಿ, ಮಾಂತ್ರಿಕ ಕಾದಂಬರಿ ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಮೂಲ ಕಾದಂಬರಿ ಮಲಯಾಳಂ ಭಾಷೆಯಲ್ಲಿದ್ದು, ಏಟುಮಾನೂರ್ ಶಿವಕುಮಾರ ಅವರು ಈ ಕಾದಂಬರಿಯನ್ನು ಬರೆದಿದ್ದಾರೆ.
ಎರಡು ಮನೆತನಗಳ ಮಧ್ಯ ಬೆಳೆದುಬಂದ ಹಗೆಯು ಹಲವು ದಶಕಗಳ ನಂತರ ಮೋಹಿನಿಯಾಗಿ ಬಂದು ಕಾಡುವ ರೋಮಾಂಚಕ ಕಥೆ ಈ ಕಾದಂಬರಿಯಲ್ಲಿದೆ. ಸಾಮಾನ್ಯವಾಗಿ ತಾಂತ್ರಿಕ ಕಾದಂಬರಿಗಳಲ್ಲಿ ತೋರುವ ಬೀಭತ್ಸ ವಿವರಗಳು ಇದರಲ್ಲಿಲ್ಲ. ಆದುದರಿಂದ ಓದುವಾಗ ಅಸಹ್ಯವಾಗುವುದಿಲ್ಲ. ಹಲವು ಘಟನೆಗಳ ಮೂಲಕ ಸೂಚ್ಯವಾಗಿ ಸಂದರ್ಭೋಚಿತವಾಗಿ ಹಿಂದಿನ ಕಥೆಯನ್ನು ತಿಳಿಸುತ್ತ ಸಾಗುವ ಕಥೆ ಓದಲು ಸರಳವಾಗಿ ಕಂಡರೂ ರಮ್ಯವಾಗಿದೆ.
ಲೇಖಕ, ಅನುವಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಮೂಲತಃ ಕಾಸರಗೋಡಿನವರು. ಮಂಗಳ ವಾರಪತ್ರಿಕೆಯ ಸಂಪಾದಕರಾಗಿರುವ ಅವರು ಮೂರು ದಶಕಗಳಿಂದ ಪತ್ರಿಕಾ ರಂಗದಲ್ಲಿದ್ದಾರೆ. 'ಬಂಜೆತನ ಬಯಸಿದವಳು' ಇವರ ಚೊಚ್ಚಲ ಕಥಾ ಸಂಕಲನವಾಗಿದ್ದು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಲಯಾಳಂನಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ’ರೂತ್ ಮತ್ತು ರಸುಲ್' ನೀಳ್ಗತೆಯನ್ನು ಮಲಯಾಳಂ ಭಾಷೆಗೂ ಅನುವಾದಿಸಿದ್ದಾರೆ. ...
READ MORE