ಎ. ಸೇತುರಾಮನ್ ಮಲಯಾಳ ಸಾಹಿತ್ಯ ಕ್ಷೇತ್ರದ ಪ್ರಮುಖ ಕಾದಂಬರಿಕಾರ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವರ ಕೃತಿಯನ್ನು ಕೆ.ಕೆ.ನಾಯರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಪಾಂಡವಪುರ ಕಾದಂಬರಿಯು ಹೆಣ್ಣಿನ ಶೋಷಣೆಯ ವಿವಿಧ ಮುಖಗಳನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಹೆಣ್ಣು ಗಂಡಿನ ಸಂಬಂಧದಲ್ಲಿ, ಗಂಡು ತನ್ನ ಪ್ರೀತಿಗೆ ಬೆಲೆ ಕೊಡದೆ ಹೊಣೆಗೇಡಿಯಾಗಿರಬಹುದು, ಆದರೆ ಹೆಣ್ಣು ಗಂಡಿನ ಮೇಲಿದ್ದ ಪ್ರೀತಿಯನ್ನು ತ್ಯಜಿಸದೆ ಅವನದೇ ನೆನಪಿನಲ್ಲಿ ಜೀವನವನ್ನು ಸಾಗಿಸುತ್ತಾಳೆ ಎಂಬ ನೈಜ ಕಥೆಯನ್ನು ಇಲ್ಲಿ ಸೇತುರಾಮನ್ ಸುಂದರವಾಗಿ ವಿವರಣೆಗಳನ್ನು ನೀಡಿದ್ದಾರೆ.
ಭಾಷಾಂತರಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಲೇಖಕ ಕೆ. ಕೆ. ನಾಯರ್. ಕೆ. ಕೆ. ನಾಯರ್ ಅವರು ಜನಿಸಿದ್ದು ಉತ್ತರ ಕೇರಳದ ಪುಟ್ಟ ಗ್ರಾಮ ಅರತ್ತಿಲ್‌ನಲ್ಲಿ. ಬಡತನದ ಕಾರಣದಿಂದ ಬಾಲ್ಯದಲ್ಲಿಯೇ ಮಣಿಪಾಲಕ್ಕೆ ವಲಸೆ ಬಂದರು. ಮಲಯಾಳಂನಿಂದ ಕನ್ನಡಕ್ಕೆ 16 ಕಾದಂಬರಿ, 7 ಕಾವ್ಯ, 5 ಸಣ್ಣ ಕಥೆಗಳ ಸಂಗ್ರಹ ಅನುವಾದಿಸಿದ್ದಾರೆ. ಅವರು ’ಒಂದು ಆತ್ಮ ಕಥನ’ (ಕುಂಞಪ್ಪ) ಮಾತ್ರ ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಿಂದ ಮಲಯಾಳಕ್ಕೆ ಐದು ಕಾದಂಬರಿ ಅನುವಾದಿಸಿರುವ ಅವರು ತಗಳಿ ಶಿವಶಂಕರ ಪಿಳ್ಳೈ ಅವರ ಮಲಯಾಳ ಕೃತಿ ‘ಕಯರ್ ’ಅನ್ನು ’ಹಗ್ಗ’ ಎಂದು ಭಾಷಾಂತರಿಸಿದ್ದರು. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ ...
READ MORE