ಸಾಯಿಸುತೆಯವರು ಬರೆಯುವ ಕಾದಂಬರಿಗಳಲಿ ವೈವಿಧ್ಯತೆ ಇದೆ. ಕಾದಂಬರಿಗಳಲ್ಲಿ ಕಾಲ್ಪನಿಕ ಪಾತ್ರಗಳು ಇದ್ದರೂ ಅವು ಬದುಕಿನ ಚಿತ್ರಣವನ್ನು ಕಟ್ಟಿ ಕೊಡುತ್ತವೆ. ಆದರಿಂದ ಕಾದಂಬರಿಗಳು ಓದುಗನಿಗೆ ಆಪ್ತ ಎನಿಸುತ್ತದೆ. ನಾರಾಯಣಪ್ಪ ಪಾರ್ವತಮ್ಮ ದಂಪತಿಗಳು.ಮಾಧು,ಶ್ಯಾಮ,ಸುಕನ್ಯಾ ಮಕ್ಕಳು. ಪೂರ್ತಿ ಹಳ್ಳಿಯ ಚಿತ್ರಣ. ಮಾಧು ಸಿಟಿ ಯಲ್ಲಿ ಓದಿದರೂ ತೋಟ,ಹಳ್ಳಿಯ ಕಡೆಗೆ ಸೆಳೆತ ಹೆಚ್ಚಾಗಿ ಊರಿಗೆ ಹಿಂತಿರುಗಿದ.ಮಾಧುಗೆ ಮದುವೆ ಮಾಡುವ ಪ್ರಸ್ತಾಪ ಬಂತು ಅತ್ತೆ ಮಗಳ ಜಾತಕ ಕೂಡಿ ಬರದೇ,ಪೇಟೆ ಹುಡುಗಿ ಸರಳ ಜೊತೆ ಮದುವೆ ಮಾಡಿದರು ಹಿರಿಯರು.ಒಂದು ಮನೆಗೆ ಸೊಸೆ ಬಂದೊಡನೆ ಸ್ವಲ್ಪ ಮಟ್ಟಿಗೆ ಬದಲಾವಣೆ ಸಹಜ.ಆದರೆ ಮನೇ ಒಡೆಯುವಂತಾದರೆ. ಮುಗ್ದ ಮನಸ್ಸಿನ ಮಾಧುಗೆ ಘಾಸಿ ಮಾಡಿದಳು. ಎಲ್ಲರನ್ನೂ ನೋಯಿಸಿದಳು. ಸೊಸೆಯಾಗಿ ಬಂದವಳು ಮನೆ ಮಗಳಾಗಬೇಕು ಆಗಾಗದಿದ್ದರೆ ಸಂಸಾರವೇ ಛಿದ್ರವಾಗುವ ಅಪಾಯಗಳನ್ನು ಈ ಕಾದಂಬರಿ ತೆರೆದಿಡುತ್ತದೆ.
©2024 Book Brahma Private Limited.