ಮಲೆಯಾಳಂನ ವಿಶಿಷ್ಟ ಕೃತಿಗಳಲ್ಲಿ ಒಂದಾಗಿರುವ ಅಕ್ಬರ್ ಕಕ್ಕಟ್ಟಿಲ್ ಅವರ ಮೃತ್ಯುಯೋಗಂ ಕಾದಂಬರಿಯನ್ನು ಡಾ. ಅಶೋಕ್ ಕುಮಾರ್ಕ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಬದುಕಿನ ಅರ್ಥ ಶೋಧನ ತೊಡಗಿರುವ ಹಲವರ ಚಿತ್ರ ಹಳ್ಳಿಯಲ್ಲಿ ತೆಂಗಿನ ಕಾಯಿ ಕೀಳುವವನು ಕೆಳಗೆ ಬೀಳುವ ಚಿತ್ರ, ನೌಕರಿಯ ಅನ್ವೇಷಣೆಯಲ್ಲಿ ನಾಪತ್ತೆಯಾಗಿ ತಂದೆ ತಾಯಿಗಳಿಗೆ ಆತಂಕವನ್ನು ತರುವ ಯುವಕ, ನಿರುದ್ಯೋಗದಿಂದ ಬೇಸತ್ತ ಯುವಕನನ್ನು ಅವನ ಆತ್ಮಹತ್ಯೆಯ ಪ್ರಯತ್ನದಿಂದ ಕಾಪಾಡಲು ಹೋಗಿ ತಾನೇ ಅಪಘಾತಕ್ಕೆ ಈಡಾಗುವ ಮತ್ತೊಬ್ಬ ಯುವಕ, ಇವರ ಚಿತ್ರಗಳು ಹಾಗೂ ಸಾವನ್ನು ಕುರಿತು ನಡೆಸುವ ಜಿಜ್ಞಾಸೆ ಇವುಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ಧಾರೆ.
ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್ ಕುಮಾರ್ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ. ...
READ MORE