ʻಅನಿಮಲ್ ಫಾರ್ಮ್ʼ1945ರಲ್ಲಿ ಪ್ರಕಟವಾದ ಇಂಗ್ಲೆಂಡ್‌ನ ಬರಹಗಾರ ಜಾರ್ಜ್ ಆರ್ವೆಲ್ ಬರೆದ ಕೃತಿಯ ಅನುವಾದವಾಗಿದೆ. ಲೇಖಕಿ ಸಹನಾ ಹೆಗಡೆ ಅವರು ಈ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಆರ್ವೆಲ್ ಇಲ್ಲಿ, ಜೋಸೆಫ್ ಸ್ಟಾಲಿನ್‌ನ ಸೋವಿಯತ್ ಆಡಳಿತದಲ್ಲಿದ್ದ ವ್ಯವಸ್ಥೆ, ಭ್ರಷ್ಟಾಚಾರದಿಂದ ತುಂಬಿಹೋಗಿದ್ದ ಸಮಾಜ, ಇದರಿಂದ ದುರಂತ ಸ್ಥಿತಿಗೆ ಸಾಗಿದ ಜನರ ಜೀವನ ಹೀಗೆ ಆತನ ದುರಾಡಳಿತದ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಆದರೆ, ಈ ಕೃತಿ ಪ್ರಕಟಣೆಯಾಗಿ ಸುಮಾರು ಐದು ವರ್ಷಗಳ ಕಾಲ ಯಾರಿಗೂ ಇದರ ಬಗ್ಗೆ ತಿಳಿದಿರಲಿಲ್ಲ. ಹೀಗೆ ಪ್ರಾಣಿಗಳಿಗೆ ಸಮಾನರನ್ನಾಗಿ ಪ್ರಜೆಗಳನ್ನು ನೋಡುತ್ತಿದ್ದ ಸರ್ವಾಧಿಕಾರಿಯ ಕುರಿತಾದ, ಕಷ್ಟ ಕಾರ್ಪಣ್ಯಗಳ ಬಗೆಗಿನ ಚಿತ್ರಣವನ್ನು ಆರ್ವೆಲ್ ಹೇಗೆ ಕಣ್ಣಿಗೆ ಕಟ್ಟುವಂತೆ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆಯೋ ಅಷ್ಟೇ ನಿಷ್ಠವಾಗಿ ಸಹನಾ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.