ಬಂಗಾಳಿ ಮೂಲದ ಹಿರಿಯ ಲೇಖಕಿ ಮಹಾಶ್ವೇತಾ ದೇವಿ ಅವರ ಕಾದಂಬರಿ ‘ರುಡಾಲಿ’. ಇದನ್ನು ಲೇಖಕಿ ಎಚ್.ಎಸ್. ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಣ್ಣುಮಕ್ಕಳನ್ನು ಕಟ್ಟಿಕೊಂಡು, ಇಟ್ಟುಕೊಂಡು ನಂತರ ಸಂಬಂಧ ಕಡಿದುಕೊಳ್ಳುವ ಹಣವುಳ್ಳವರು ಹುಟ್ಟು ಹಾಕಿದ ಅನಿಷ್ಟ ಪದ್ಧತಿ ರುಡಾಲಿ. ಸಾಮಾಜಿಕವಾಗಿ ಅಮಾನವೀಯವಾಗಿರುವ ಈ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವುದು ಕಾದಂಬರಿ ಉದ್ದೇಶ. ರುಡಾಲಿ ಪದ್ಧತಿಗೆ ಒಳಪಟ್ಟ ಹೆಣ್ಣು ಶನಿಚರಿ. ಈಕೆಯ ನೋವುಗಳನ್ನು ಅನಾವರಣಗೊಳಿಸುತ್ತದೆ. ಆದರೆ, ಪುರುಷ ಪ್ರಧಾನ ಸಮಾಜ ಮಾತ್ರ ಇದಕ್ಕೆ ಕಿವಿಗೊಡದು. ಉಳ್ಳವರು ಸತ್ತರೆ ಅವರ ಶವದ ಮುಂದೆ ಕುಳಿತು ರುಡಾಲಿ ಹೆಣ್ಣುಮಕ್ಕಳು ಅಳುವುದೂ ಸಹ ಪದ್ಧತಿಯ ಭಾಗವೇ ಆಗಿದೆ. ಇಂತಹ ಕ್ರೂರ ಪದ್ಧತಿಯನ್ನು ಕಾದಂಬರಿ ಮೂಲಕ ಅನಾವರಣಗೊಳಿಸಿದೆ. “ರುಡಾಲಿ” ಕಥೆಯು ಹಿಂದಿಯಲ್ಲಿ ಕಲ್ಪನಾ ಲಾಜ್ಮಿಯವರು ಚಲನಚಿತ್ರ ಮಾಡಿದ್ದಾರೆ. ಡಿಂಪಲ್ ಕಪಾಡಿಯಾ, ರಾಖಿ ಗುಲ್ಜಾರ್, ರಾಜ್ ಬಬ್ಬರ್ , ಅಮ್ಜದ್ ಖಾನ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗುಲ್ಜಾರ್ ಅವರು ಗೀತೆಗಳ ಸಾಹಿತ್ಯ ರಚಿಸಿದ್ಮದು, ಭೂಪೇನ್ ಹಝಾರಿಕಾ ಸಂಗೀತ ನಿರ್ದೇಶಿಸಿದ್ದಾರೆ.
©2024 Book Brahma Private Limited.