‘ಕಾಮ ಕೂಪ’ ರಷ್ಯಾ ಮೂಲದ ಖ್ಯಾತ ಲೇಖಕ ಅಲೆಗ್ಸಾಂಡರ್ ಕುಫ್ರಿನ್ ಅವರ ಕಾದಂಬರಿಯ ಅನುವಾದ. ತೆಲುಗಿಗೆ ಅನುವಾದವಾಗಿದ್ದ ಈ ಕಾದಂಬರಿಯನ್ನು ಲೇಖಕ, ಅನುವಾದಕ ಡಾ.ಟಿ.ಡಿ. ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾದಂಬರಿಯ ವಸ್ತು-ವೇಶ್ಯಾಜಗತ್ತಿನ ಕಣ್ಣೀರ ಕಥನ. ಇದು ಕೇವಲ ರಷ್ಯಾ ಜನರ ಬದುಕು ಮಾತ್ರವಲ್ಲ, ಆ ನಗರದಲ್ಲಿರುವ ವ್ಯಭಿಚಾರದ ಶೃಂಗಾರಗಾಥೆ. ಶೃಂಗಾರಪುರ(ಯಾಮಾ) ಪ್ರವೇಶ ವಿಶಿಷ್ಟ ಮತ್ತು ವಿಭಿನ್ನ ಓದುಗರನ್ನು ಬೇರೊಂದು ಪ್ರಪಂಚಕ್ಕೆ ತೆರೆದುಕೊಂಡು ಹೋಗುವ ಈ ಪುರದ ಬೀದಿಯನ್ನು ಪ್ರತಿಯೊಬ್ಬರೂ ಇಷ್ಟಪಟ್ಟು ಪ್ರವೇಶಿಸುತ್ತಾರೆ. ಉದ್ದಕ್ಕೂ ವಿಹರಿಸಿ, ಆನಂದಿಸಿ, ಅಚ್ಚರಿ ವ್ಯಕ್ತಪಡಿಸಿ, ಅಸಹ್ಯಪಟ್ಟು, ಮೂಗುಮುರಿಯುತ್ತಾ ಕಡೆಗೆ ಅನುಕಂಪದಿಂದ ಹೊರ ನಡೆಯುತ್ತಾರೆ. ಕಥಾ ವಸ್ತುವಿನಲ್ಲಿ ಹಸಿ, ಹಸಿ ಶೃಂಗಾರವಿದೆ. ನೋವಿದೆ, ಸಂಕಟವಿದೆ, ಸಿಟ್ಟಿದೆ, ದ್ವೇಷವಿದೆ ಅಸಹಾಯಕತೆ ಇದೆ ಮತ್ತು ಕ್ರೂರತೆ ಇದೆ. ಕೆಲವು ಕಡೆ ಮಾನವೀಯತೆಯೂ ಇದೆ.
©2024 Book Brahma Private Limited.