ಸಮಾಜದಲ್ಲಿ ಪ್ರತಿಯೊಬ್ಬ ಜಾತಿಯವರಿಗೆ ಸಮಾಜವೇ ನಿರ್ಣಯಿಸಿ ನೀಡಿದ ವ್ಯವಸಾಯ ಇರುತ್ತದೆ. ಆದರೆ, ಅಲೆಮಾರಿ ಸಮುದಾಯಕ್ಕೆ ಸೇರಿದ ಬಡಜನರ ತಂಡವೊಂದು ಸ್ವಂತ ವ್ಯವಸಾಯವನ್ನು ಹೊಂದಿರದೆ, ಹೊಟ್ಟೆ ಪಾಡಿಗಾಗಿ ಊರಿನವರ ಮನೆಬಾಗಿಲಲ್ಲಿ, ಹೊಲದಲ್ಲಿ ಜೀತದಾಳುಗಳಾಗಿ ದುಡಿಯುತ್ತಾ, ಬರಗಾಲದ ದಿನಗಳಲ್ಲಿ ನೀರಿನಾಶ್ರಯವನ್ನು ಅರಸಿ ಮತ್ತೊಂದು ಪ್ರದೇಶಕ್ಕೆ ಹೋದಾಗ, ಶೋಷಕ ವರ್ಗದ ಕೈಸೆರೆಯಾಗಿ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿ, ಕ್ರಮೇಣ ಕಾಡು ಪಾಲಾಗಿ, ಜೀವಹಾನಿಯನ್ನು ಭರಿಸಬೇಕಾದ ರುದ್ರಭಯಾನಕ ಚಿತ್ರಣವನ್ನು ಈ ಕಾದಂಬರಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದೆ. ಅಲಕ್ಷಿತ ಸಮುದಾಯಗಳ ಹಾಗೂ ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ವೃತ್ತಿಗಳ ಕುರಿತು ಅಪಾರ ಕಾಳಜಿ ಹೊಂದಿದ ಲೇಖಕರು ಈ ಕಾದಂಬರಿ ರಚಿಸಿದ್ದಾರೆ. ಗೀತಾ ಶೆಣೈ ಅವರು ಕೊಂಕಣಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.