ಬಿ. ಸುಜ್ಞಾನಮೂರ್ತಿ ಈವರೆಗೆ 40 ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿದ್ದಾರೆ. ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಕಾದಂಬರಿಯ ಅನುವಾದಕ್ಕೆ 2003 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಭಾಷಾಂತರ ವಿಭಾಗದಲ್ಲಿ ಪುಸ್ತಕ ಬಹುಮಾನ ಲಭಿಸಿದೆ. ಈ ಕಾದಂಬರಿಯೂ ಮುಂಡಾ ಬುಡಕಟ್ಟು ಜನರ ಹೋರಾಟಗಳ ಕುರಿತು ವಿವರಿಸುತ್ತದೆ. ಬುಡಕಟ್ಟು ಜನರ ದೈನಂದಿನ ಬದುಕು, ಅವರ ಸಮಸ್ಯೆಗಳನ್ನು ವಿವರಿಸುತ್ತದೆ.
ಮುಂಡಾ ತನ್ನ ಜನರ ಹಕ್ಕುಗಳಿಗಾಗಿ ಬ್ರಿಟಿಷರ ಆಡಳಿವನ್ನು ವಿರೋಧಿಸಿ ಅವರ ವಿರುದ್ದ ಹೋರಾಡಿ, ಅವರ ಸಂಚಿಗೆ ಬಲಿಯಾಗಿ ನ್ಯಾಯ ದೊರೆಯದೆ, ಕೊನೆಗೆ ಸೆರೆಮನೆಯಲ್ಲೇ ಕೊಲೆಯಾದವನು. ಜನರು ಅವನನ್ನು ದೇವರಸ್ಥಾನಕ್ಕೆ ಏರಿಸಿ ಪ್ರಸ್ತುತ ಆಡಳಿತ ಅವನನ್ನು ಜನ ನಾಯಕನೆಂದು ಪರಿಗಣಿಸಿ ಪ್ರತಿಮೆ, ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಅರಣ್ಯ ಯಾರದು? ಈ ಪ್ರಶ್ನೆ ಎಷ್ಟೋ ಶತಮಾನಗಳಿಂದ ಅರಣ್ಯದೊಡನೆ ಬದುಕುತ್ತಿರುವ ಬುಡಕಟ್ಟು ಜನರ ಅಳಲಿದೆ. ರಾಜ್ಯಾಡಳಿತ ಲೂಟಿಕೋರರು ಈ ಲೂಟಿಕೋರರಿಗೆ ಪೊಲೀಸರ ಕಾವಲುಗಾರಿಕೆ ಹೀಗೆ ವಿವಿಧ ಸ್ತರದಲ್ಲಿ ಚರ್ಚಿತವಾಗಿರುವ ಹಲವು ಪ್ರಮುಖ ಅಂಶಗಳನ್ನು ’ಯಾರದೀ ಕಾಡು’ ಎಂಬ ಕಾದಂಬರಿಯಲ್ಲಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.