ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅರುಣ್ ಜೋಷಿ ಅವರ ’ದಿ ಲಾಸ್ಟ್ ಲ್ಯಾಬಿರಿಂಥ್’ ಕಾದಂಬರಿಯನ್ನು ಬಿ.ಆರ್. ಜಯರಾಮರಾಜೇ ಅರಸ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಮಕಾಲೀನ ವಿಷಯಗಳು ಈ ಕಾದಂಬರಿಯ ಕಥಾ ವಸ್ತುವಾಗಿದೆ. ವಸಾಹಾತೋತ್ತರ ಯುಗದ ಯುವಕರು ಆಧ್ಯಾತ್ಮಿಕವಾಗಿ ಗಟ್ಟಿಗರಲ್ಲ. ಆಧ್ಯಾತ್ಮಿಕ ಬೇರುಗಳ ಮರುಶೋಧವೇ ಇದಕ್ಕೆ ಇರುವ ಪ್ರಮುಖ ಪರಿಹಾರ. ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯ ಮನಸ್ಸಿನ ಆಳದಲ್ಲಿ ಇರುವುದರಿಂದಾಗಿ ಪಾಶ್ಚಿಮಾತ್ಯರ ಅನುಕರಣೆಯು ಎಂದಿಗೂ ಜೀವನಸುಖ ನೀಡಲು ಸಾಧ್ಯವಿಲ್ಲ ಎಂದು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.