ಕರಮಜೋವ್ ಸಹೋದರರು

Author : ಕೆ. ಶ್ರೀನಾಥ

Pages 1208

₹ 750.00




Year of Publication: 2021
Published by: ಆಕೃತಿ ಪ್ರಕಾಶನ
Address: ರಾಜಾಜಿನಗರ, ಬೆಂಗಳೂರು

Synopsys

ರಷ್ಯಾ ಕಾದಂಬರಿಕಾರ ಫೋದೊರ್ ದಾಸ್ತೋವ್ ಸ್ಕಿ ಅವರು ಬರೆದ ಕಾದಂಬರಿ-ದಿ. ಬ್ರದರ್ಸ್ ಕರಮಜೋವ್. ಅದನ್ನು‘ಕರಮಜೋವ್ ಸಹೋದರರು’ ಶೀರ್ಷಿಕೆಯಡಿ ಲೇಖಕ ಕೆ. ಶ್ರೀನಾಥ ಅವರು ಕನ್ನಡೀಕರಿಸಿದ್ದಾರೆ. ಕೌಟುಂಬಿಕ ಆಸ್ತಿ-ಹಣ-ಸಂಪತ್ತಿನ ಪಾಲು, ಧರ್ಮಗುರುಗಳು, ಶ್ರೀಮಂತ ಭೂಮಾಲೀಕರು ಹೀಗೆ ಸುತ್ತುವ ವಿಚಾರಗಳು, ಸೃಷ್ಟಿಗೊಳ್ಳುವ ಸನ್ನಿವೇಶಗಳು ಈ ಕಾದಂಬರಿಯ ಕುತೂಹಲಕ್ಕೆ ಮೂಲ ಕಾರಣವಾಗಿವೆ. ಒಂದೇ ಕುಟುಂಬದ ಸದಸ್ಯರೇ ಇಲ್ಲಿಯ ಪಾತ್ರಧಾರಿಗಳು. ಆಸ್ತಿ ವಿವಾದ ಬಗೆಹರಿಸಲು ಧರ್ಮಗುರುಗಳು ಪಾಲ್ಗೊಳ್ಳುತ್ತಾರೆ. ಈ ಮಧ್ಯೆ ಶ್ರೀಮಂತರು ನುಸುಳುತ್ತಾರೆ. ಆ ಮೂಲಕ, ಜೀವನಕ್ಕೆ ಹೆದರಿಬೇಡಿ, ಉತ್ತಮವಾದದ್ದನ್ನು ಮಾಡಿ ಎಂಬ ಸಂದೇಶ ನೀಡುವ ಕಾದಂಬರಿ ಇದು.

 

 

About the Author

ಕೆ. ಶ್ರೀನಾಥ

ಲೇಖಕ, ಅನುವಾದಕ ಕೆ. ಶ್ರೀನಾಥ್ ಕೈಗಾರಿಕೋದ್ಯಮಿಯಾಗಿದ್ದವರು, ಸದ್ಯ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ನಾಡಿಮಿಡಿತ' ಇವರ ಮೊದಲ ಕಾದಂಬರಿ. ಸಾಹಿತ್ಯಕವಾಗಿ ಮಾತ್ರವಲ್ಲದೇ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಶ್ರೀನಾಥ್ ಅವರು ಅನೇಕ ಧಾರಾವಾಹಿ ಹಾಗೂ ಸಿನೆಮಾಗಳಲ್ಲಿಯೂ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಆಕ್ರಮಣ ಇವರು ನಟಿಸಿದ ಮೊದಲ ಚಿತ್ರ. ಶ್ರೀನಾಥ್ ಅವರ ಮೊದಲ ಕೃತಿ ಇಂಗ್ಲೀಷ್ ಕಾದಂಬರಿ Souls od Samaritans. ಈ ಕೃತಿಯನ್ನು ಪೆಂಗ್ವಿನ್ ಅಂಗಸಂಸ್ಥೆಯಾದ ಪಾರ್ಟ್ರಿಡ್ಜ್ ಪ್ರಕಟಿಸಿದೆ. ಅನುವಾದಕರಾಗಿ ಪರ್ಲ್ ಎಸ್, ಬಕ್ ಅವರ ಗುಡ್ ಅರ್ತ್, ಮತ್ತು ಸ್ಪಾನಿಶ್ ನ ಮಾರ್ಕೋಸ್ ...

READ MORE

Related Books